ಕೊರೋನಾ ಸೋಂಕು ಶಂಕೆ; ತುಮಕೂರಿನ ವ್ಯಕ್ತಿಯ ತಪಾಸಣೆ ವೇಳೆ ನೆಗೆಟಿವ್ ವರದಿ

ಬೆಂಗಳೂರು, ಫೆ 5 : ಇತ್ತೀಚೆಗೆ ತುಮಕೂರಿಗೆ ಆಗಮಿಸಿದ ಚೀನಾ ವಿದ್ಯಾರ್ಥಿಯೋರ್ವನಲ್ಲಿ ಮಾರಣಾಂತಿಕ ಕೊರೋನಾ ವೈರಾಣು ಸೋಂಕು ಕಂಡುಬಂದಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಯಿತು. ಆದರೆ ವರದಿ ಬಂದಾಗ ನೆಗೆಟಿವ್ ಇತ್ತು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.  

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚೀನಾದಿಂದ ಆಗಮಿಸುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಸಿಂಗಾಪುರ, ಥಾಯ್ಲೆಂಡ್ ನಿಂದ ಆಗಮಿಸಲಿರುವ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ. ಫೆ. 1ರಿಂದ ಇಲ್ಲಿಯವರೆಗೆ 10184 ಪ್ರಯಾಣಿಕರನ್ನು ತಪಾಸಣೆ ನಡೆಸಲಾಗಿದೆ. 

ಫೆ. 5ರಂದು ಒಟ್ಟು 12 ವಿಮಾನಗಳಲ್ಲಿ ಆಗಮಿಸಿರುವ 888 ಪ್ರಯಾಣಿಕರ ಥರ್ಮಲ್ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ ಯಾರೊಬ್ಬರಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.