ನ್ಯೂಯಾರ್ಕ್, ಏ 12, ಪ್ರಪಂಚದಾದ್ಯಂತ ಭಾನುವಾರ ಬೆಳಗಿನವರೆಗೆ 17 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.ವಿಶ್ವದಾದ್ಯಂತ 17,76,157 ಜನರಿಗೆ ಸೋಂಕು ತಗುಲಿದ್ದು 1,08,804 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಅಮೆರಿಕದಲ್ಲಿ ಅತಿ ಹೆಚ್ಚು 20000 ಜನರು ಈ ಸೋಂಕಿನಿಂದ ಮೃತಪಟ್ಟಿದ್ದು ಇಟಲಿಯಲ್ಲಿ 19468 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.ಅಮೆರಿಕದಿಂದಲೇ ಅತಿ ಹೆಚ್ಚು 527111 ಪ್ರಕರಣಗಳು ವರದಿಯಾಗಿವೆ. ಸ್ಪೇನ್ ನಲ್ಲಿ 1,61,852 ಮತ್ತು 1,52,271 ಪ್ರಕರಣಗಳು ವರದಿಯಾಗಿವೆ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿ 1,30,727 ಮತ್ತು 1,25,452 ಪ್ರಕರಣಗಳು ದೃಢಪಟ್ಟಿದೆ.ಈ ಮಧ್ಯೆ 4,02,903 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದೂ ವರದಿ ತಿಳಿಸಿದೆ.