ಕರೋನವೈರಸ್ ಸೋಂಕು: ಹುಬೈ ಪ್ರಾಂತ್ಯಕ್ಕೆ 68 ವೈದ್ಯಕೀಯ ತಂಡ

ವುಹಾನ್, ಫೆಬ್ರವರಿ 3 ,ಕರೋನವೈರಸ್ ನಿಯಂತ್ರಣಕ್ಕೆ ನೆರವಾಗಲು ಒಟ್ಟು 8,310 ಸದಸ್ಯರನ್ನು ಒಳಗೊಂಡ ಹೊಂದಿರುವ 68 ನುರಿತ  ವೈದ್ಯಕೀಯ ತಂಡಗಳನ್ನು ಚೀನಾದ ಹುಬೈ ಪ್ರಾಂತ್ಯಕ್ಕೆ ಕಳುಹಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಈ ವೈದ್ಯಕೀಯ ತಂಡಗಳು 29 ಪ್ರಾಂತ್ಯಗಳು, ಪುರಸಭೆಗಳು ಮತ್ತು ಸ್ವಾಯತ್ತ ಪ್ರದೇಶಗಳ ಜೊತೆಗೆ ಆರೋಗ್ಯ ಆಯೋಗ, ಟಿಸಿಎಂನ ರಾಷ್ಟ್ರೀಯ ಆಡಳಿತ ಮತ್ತು ಚೀನಾ ಅಕಾಡೆಮಿ ಆಫ್ ಚೈನೀಸ್ ಮೆಡಿಕಲ್ ಸೈನ್ಸಸ್ ಮತ್ತು ಮಿಲಿಟರಿ,ಸಹ  ಇದರಲ್ಲಿ  ಸೇರಿದೆ ಎಂದೂ  ಹುಬೈ ಪ್ರಾಂತ್ಯದ ಉಪ ಗವರ್ನರ್ ಕ್ಸಿಯಾವೋ ಜುಹುವಾ ಹೇಳಿದ್ದಾರೆ.       

ಈ ವೈದ್ಯಕೀಯ ತಂಡದಲ್ಲಿ  ಅನುಭವಿ ತಜ್ಞರು, ವೈದ್ಯರು ಮತ್ತು ಉಸಿರಾಟ, ಸೋಂಕು ಮತ್ತು ನಿರ್ಣಾಯಕ ಆರೈಕೆ.ಅಗತ್ಯ ಔಷಧಿ,  ದಾದಿಯರನ್ನೂ  ಒಳಗೊಂಡಿವೆ ಎಂದು ಕ್ಸಿಯಾವೋ ವಿವರ ನೀಡಿದರು. ಕೆಲವು ವೈದ್ಯಕೀಯ ಸಿಬ್ಬಂದಿಗೆ  ಎಬೋಲಾ ವಿರುದ್ಧ ಕೆಲಸ ಮಾಡಿದ  ಅನುಭವವಿದೆ.ಒಟ್ಟು, 6,775 ವೈದ್ಯಕೀಯ ಸಿಬ್ಬಂದಿಗಳ 57 ವೈದ್ಯಕೀಯ ತಂಡಗಳನ್ನು ಕರೋನವೈರಸ್ ಸಾಂಕ್ರಾಮಿಕ ಕೇಂದ್ರವಾದ ವುಹಾನ್‌ನಲ್ಲಿರುವ 27 ಗೊತ್ತುಪಡಿಸಿದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಒಟ್ಟು 11 ವೈದ್ಯಕೀಯ ತಂಡಗಳನ್ನು ಹಾಗೂ  1,535 ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಭಾನುವಾರದ ವರೆಗೆ ಚೀನಾದಲ್ಲಿ   ಒಟ್ಟು 350 ಜನರು ಮೃತಪಟ್ಟಿದ್ದಾರೆ ಎಂದು  ವರದಿಯಾಗಿದೆ.