ಕೊರೋನಾ ಸೋಂಕಿಗೆ ಪಂಜಾಬ್ ನಲ್ಲಿ ಮೊದಲ ಬಲಿ, ದೇಶದಲ್ಲಿ ಮೃತರ ಸಂಖ್ಯೆ 4ಕ್ಕೇರಿಕೆ

ಜಲಂಧರ್ , ಮಾ 19  ಕೊರೋನಾ ವೈರಸ್ ಗೆ  ಪಂಜಾಬ್ ನಲ್ಲಿ ಮೊದಲ ಬಲಿ ವರದಿಯಾಗಿದೆ. ಇದರಿಂದ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ.
ಇಲ್ಲಿನ ಶಹೀದ್ ಭರತ್ ಸಿಂಗ್ ನಗರದ ಬಾಂಗ ಪೊಲೀಸ್ ಠಾಣೆ ವ್ಯಾಪ್ತಿಯ ಪಥ್ವಾಲ ಗ್ರಾಮದಲ್ಲಿ ಮೊದಲ ಸಾವು ವರದಿಯಾಗಿದೆ ಎಂದುಅಧಿಕೃತಮೂಲಗಳು ದೃಢಪಡಿಸಿವೆ.
70 ವರ್ಷದ ಮೃತ ವ್ಯಕ್ತಿ ಈ ಹಿಂದೆ ಇಟಲಿ ಹಾಗೂ ಜರ್ಮನಿಗೆ ಪ್ರಯಾಣ ಮಾಡಿದ್ದರು ಎಂದು ತಿಳಿದುಬಂದಿದೆ.