ಮೆಕ್ಸಿಕೋ, ಏ 5, ಮೆಕ್ಸಿಕೋದಲ್ಲಿ ಕೊರೊನಾ ವೈರಾಣೂ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 19 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 60 ರಿಂದ 79 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಹೂಗೋ ಲೋಪೆಜ್ ಗಟೇಲ್ ಹೇಳಿದ್ದಾರೆ. ವಯೋಸಹಜ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಇವರುಗಳಲ್ಲಿ ರೋಗದ ಲಕ್ಷಣಗಳು ತೀವ್ರವಾಗಿದ್ದು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರ. ಈವರೆಗೆ ಮೆಕ್ಸಿಕೋದಲ್ಲಿ 1890 ಕೊರೊನಾ ವೈರಾಣು ಸೋಂಕು ಪ್ರಕರಣಗಳು ದಾಖಲಾಗಿವೆ. 9467 ಜನರಲ್ಲಿ ಸೋಂಕು ಇಲ್ಲದಿರುವುದು ಖಚಿತವಾಗಿದ್ದು 5827 ಪ್ರಕರಣಗಳ ಅಧ್ಯಯನ ನಡೆದಿದೆ ಎಂದು ಸಹ ಅವರು ಮಾಹಿತಿ ನೀಡಿದ್ದಾರೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಕಾರಣ ಮೆಕ್ಸಿಕೋ ಪ್ರಾಧಿಕಾರ ಶುಕ್ರವಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಹೋಟೆಲ್ ಮತ್ತು ಬೀಚ್ ಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲು ಸೂಚಿಸಲಾಗಿದೆ.ಕೋವಿಡ್ 19 ಅನ್ನು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಮಾರ್ಚ್ 11 ರಂದು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಜಗತ್ತಿನಾದ್ಯಂತ 11,96,000 ಜನರಿಗೆ ಸೋಂಕು ತಗುಲಿದ್ದು 64000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.