ಮಾಸ್ಕೋ, ಏ 15,ಮಾಸ್ಕೋದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಾಣು ಸೋಂಕಿನಿಂದ 11 ಜನರು ಮೃತಪಟ್ಟಿದ್ದು ಒಟ್ಟು ಈ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 106 ಕ್ಕೆ ಏರಿಕೆಯಾಗಿದೆ ಎಂದು ಕೊರೊನಾ ವೈರಾಣು ಪ್ರತಿಕ್ರಿಯಾ ಕೇಂದ್ರದ ಹೇಳಿಕೆ ತಿಳಿಸಿದೆ.ನ್ಯುಮೋನಿಯಾದಿಂದ ಬಳಲುತ್ತಿದ್ದ 11 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿತ್ತು ಎಂದು ಕೇಂದ್ರ ಹೇಳಿದೆ. ಮೃತರು 48 ರಿಂದ 86 ವರ್ಷ ವಯೋಮಾನದವರಾಗಿದ್ದು ಎಲ್ಲರೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದೂ ಮಾಹಿತಿ ನೀಡಿದೆ.