ಕರೋನವೈರಸ್ : ಹಾಂಗ್ ಕಾಂಗ್‌ನಲ್ಲಿ ನ್ಯುಮೋನಿಯಾ ಪ್ರಕರಣಗಳ ಏರಿಕೆ

ಹಾಂಗ್ ಕಾಂಗ್, ಜನವರಿ 25 ,ಕರೋನವೈರಸ್ ನಿಂದ ಹೊಸದಾಗಿ ಇನ್ನೂ ಮೂರು ನ್ಯುಮೋನಿಯಾ ಪ್ರಕರಣ ವರದಿಯಾಗಿದ್ದು,  ಒಟ್ಟು ದೃಡಪಡಿಸಿದ  ಪ್ರಕರಣಗಳ ಸಂಖ್ಯೆ  ಏರಿಕೆಯಾಗಿದೆ.ವುಹಾನ್‌ನ ಮೂವರು ಪ್ರಯಾಣಿಕರ ಉಸಿರಾಟದ ಮಾದರಿಗಳನ್ನು  ಕೊರೊನಾವೈರಸ್‌ಗೆ ಧನಾತ್ಮಕವಾಗಿ ಪರೀಕ್ಷಿಸಲಾಗಿದೆ . ಹಾಂಗ್ ಕಾಂಗ್ ವಿಶೇಷ ಆಡಳಿತ ವಲಯ (ಎಚ್‌ಕೆಎಸ್‌ಎಆರ್) ಸರ್ಕಾರದ ಆರೋಗ್ಯ ಇಲಾಖೆಯ ಆರೋಗ್ಯ ಸಂರಕ್ಷಣಾ ಕೇಂದ್ರ (ಸಿಎಚ್‌ಪಿ) ಪ್ರಕಾರ, ರೋಗಿಗಳು  ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿದ್ದರು. ಮೂರು ಹೊಸ ಪ್ರಕರಣಗಳಲ್ಲಿ, ಮೊದಲನೆಯದು 62 ವರ್ಷದ ಮಹಿಳೆ, ಅವರು ಜನವರಿ 19 ರಂದು ರೈಲಿನಲ್ಲಿ ಹಾಂಗ್ ಕಾಂಗ್‌ಗೆ ಆಗಮಿಸಿ ಮಾರನೆ ದಿನ  ಜ್ವರದ ಬಾದೆಗೆ ಒಳಗಾದರು.ಆಕೆಯೊಂದಿಗೆ ಹಾಂಕಾಂಗ್‌ಗೆ ಬಂದ   ಆಕೆಯ ಕುಟುಂಬದ ಮೂವರು ಸದಸ್ಯರು ಯಾವುದೇ ರೋಗಲಕ್ಷಣ ಕಾಣಿಸದಿದ್ದರೂ ಅವರನ್ನು ಲೇಡಿ ಮ್ಯಾಕ್‌ಲೆಹೋಸ್ ಹಾಲಿಡೇ ವಿಲೇಜ್‌ಗೆ  ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ. ಇತರ ಎರಡು ಪ್ರಕರಣಗಳಲ್ಲಿ ಕ್ರಮವಾಗಿ 62 ಮತ್ತು 63 ರ ವುಹಾನ್ ದಂಪತಿಗಳು ಸೇರಿದ್ದಾರೆ.

122 ಪ್ರಕರಣಗಳನ್ನು ಪರೀಕ್ಷೆಯ  ನಂತರ  ಕೊರೊನಾವೈರಸ್ ಸೋಂಕು ಇಲ್ಲ ಎಂದು  ಖಚಿತಪಡಿಸಿಕೊಂಡ  ನಂತರ ಆಸ್ಪತ್ರೆಯಿಂದ ಅವರನ್ನು  ಬಿಡುಗಡೆ ಮಾಡಲಾಗಿದೆ.ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಿಂದ ಹಿಂತಿರುಗಿದ ನಂತರ ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ  ಎಚ್‌ಕೆಎಸ್‌ಎಆರ್ ಮುಖ್ಯ ಕಾರ್ಯನಿರ್ವಾಹಕ ಕ್ಯಾರಿ ಲ್ಯಾಮ್,   ಸಾರ್ವಜನಿಕರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿದ್ದು,. ನ್ಯುಮೋನಿಯಾ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ಶನಿವಾರದ  ನಂತರ ನಡೆಯಲಿದೆ ಎಂದರು. ಶಂಕಿತ ಪ್ರಕರಣಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ  ವಿಮಾನ ಮತ್ತು ರೈಲ್ವೆ ಮೂಲಕ ಒಳಬರುವ ಪ್ರಯಾಣಿಕರ ಮೇಲೆ ಕಡ್ಡಾಯ ಆರೋಗ್ಯ ಘೋಷಣೆ ನಿಯಮ ಜಾರಿ ಮಾಡಲಾಗಿದೆ.