ಬೀಜಿಂಗ್, ಫೆ 11,ಚೀನಾದಲ್ಲಿ ಕೊರೋನಾ ವೈರಾಣು ಸೋಂಕಿನ ಮರಣ ಮೃದಂದ ಮುಂದುವರಿದಿದ್ದು, ಸಾವರ ಸಂಖ್ಯೆ 1000 ದಾಟಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ ಸೋಮವಾರ 108 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 103 ಜನರು ಹುಬೇ ಪ್ರಾಂತ್ಯವೊಂದಲ್ಲೇ ಸಾವನ್ನಪ್ಪಿದ್ದಾರೆ. ಆದರೆ, ಈ ಪ್ರಾಂತ್ಯದಲ್ಲಿ ಸೋಂಕಿಗೆ ಗುರಿಯಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದುಇಲಾಖೆ ಮಾಹಿತಿ ನೀಡಿದೆ.
ಆದರೆ, ದೇಶಾದ್ಯಂತ ಸೋಂಕು ಪತ್ತೆಯಾದರ ಸಂಖ್ಯೆ 42, 638ಕ್ಕೇರಿದೆ. ಕಳೆದ ವಾರ ವುಹಾನ್ ನಿಂದ ಸ್ಥಳಾಂತರಿಸಲ್ಪಟ್ಟ ಅಮೆರಿಕ ಪ್ರಜೆಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಇದು ಅಮೆರಿಕದ 13ನೇ ಪ್ರಕರಣವಾಗಿದೆ. ಈ ನಡುವೆ, ಹಾಂಗ್ ಕಾಂಗ್ ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಸಂಪೂರ್ಣ ಅಪಾರ್ಟ್ ಮೆಂಟ್ ನ ಜನರನ್ನು ತೆರವುಗೊಳಿಸಲಾಗಿದೆ. ಯಕೊಹೋಮಾದಲ್ಲಿ ತಡೆಹಿಡಿದಿರುವ ಹಡಗಿನಲ್ಲಿ ಮತ್ತೆ ಆರು ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 135ಕ್ಕೆ ಏರಿಕೆಯಾಗಿದೆ.