ರೋಮ್, ಫೆ 27 : ಹಲವಾರು ಯುರೋಪಿಯನ್ ರಾಷ್ಟ್ರಗಳು ಹೊಸ ಕೊರೊನಾವೈರಸ್ ಪ್ರಕರಣಗಳನ್ನು ಘೋಷಿಸಿದ್ದು, ಈಗ ಇಟಲಿಯಲ್ಲಿ ಇದರ ಸಂಖ್ಯೆ 400 ಕ್ಕೆ ಏರಿಕೆಯಾಗಿದೆ .ಆದರೂ ಜಾಗತಿಕವಾಗಿ ಹೆಚ್ಚಿನ ಪ್ರಕರಣಗಳು ಚೀನಾದಲ್ಲೆ ವರದಿಯಾಗುತ್ತಿದೆ . ಯುರೋಪಿನ ಸೋಂಕಿನ ಮುಖ್ಯ ಕೇಂದ್ರವಾದ ಇಟಲಿಯಲ್ಲಿ ಕಳದೆ 24 ಗಂಟೆಗಳಲ್ಲಿ 25 ಪ್ರತಿಶತದಷ್ಟು ಸೋಂಕು ಹೆಚ್ಚಳವಾಗಿದೆ ಎಂದೂ ಬಿಬಿಸಿ ಸುದ್ದಿ ವರದಿ ತಿಳಿಸಿದೆ.ಮಾರಕ ಸೋಂಕು ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ.ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿಕೆಯ ಪ್ರಕಾರ, ಮೊದಲ ಬಾರಿಗೆ ವೈರಸ್ ಚೀನಾದ ಹೊರಗೆ ವೇಗವಾಗಿ ಹರಡುತ್ತಿದೆ, ಜಾಗತಿಕವಾಗಿ, ಡಿಸೆಂಬರ್ನಲ್ಲಿ ಹೊರಹೊಮ್ಮಿದ ಹೊಸ ಕೊರೊನಾವೈರಸ್ನಿಂದ ಸುಮಾರು 40 ದೇಶಗಳಲ್ಲಿ 80,ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.