ಬೀಜಿಂಗ್, ಫೆ 27 : ಚೀನಾದಲ್ಲಿ ಕೊರೊನಾವೈರಸ್ ಸೊಂಕಿನಿಂದ ಮೃತರ ಸಂಖ್ಯೆ ಏರುತ್ತಲೆ ಇದ್ದು ಈಗ 2,744 ಕ್ಕೆ ತಲುಪಿದೆ. ದೇಶಾದ್ಯಂತ ಒಟ್ಟು 78,ಸಾವಿರದ 497 ಸೋಂಕು ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಸಮಿತಿ ತಿಳಿಸಿದೆ.31 ಪ್ರಾಂತ್ಯಗಳ ಇತ್ತೀಚಿನ ಮಾಹಿತಿಯ ಪ್ರಕಾರ, 32,495 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.ಕಳೆದ 24 ಗಂಟೆಗಳಲ್ಲಿ, ಕೋವಿಡ್ -19 ಸೋಂಕಿತರಲ್ಲಿ 29 ಜನರು ಸಾವನ್ನಪ್ಪಿದ್ದಾರೆ, 433 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು 2,750 ಜನರು ಚೇತರಿಸಿಕೊಂಡಿದ್ದಾರೆ ಎಂದೂ ಅಧಿಕೃತ ಮೂಲಗಳು ಹೇಳಿವೆ.