ಮಾಸ್ಕೋ, ಫೆ 3, ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ ಬಲಿಯಾದವರ ಸಂಖ್ಯೆ 361 ಕ್ಕೆ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 57 ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಆಯೋಗ ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ಪ್ರಕಾರ, ಸೋಂಕಿಗೆ ತುತ್ತಾದವರ ಸಂಖೆ 17,205. ಅಲ್ಲದೇ ಇನ್ನೂ 21,558 ಜನರಿಗೆ ಸೋಂಕು ತಗುಲಿರುವ ಶಂಕೆಯಿದ್ದು ಅವರನ್ನು ತೀವ್ರ ನಿಗಾದಲ್ಲಿಡಲಾಗಿದೆ. ಕಳೆದ ಡಿಸೆಂಬರ್ ಕೊನೆಯಲ್ಲಿ ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಲ್ಲಿ ಈ ಸೋಂಕು ಮೊದಲ ಬಾರಿಗೆ ಪತ್ತೆಯಾಗಿದ್ದು ಈಗ ಸುಮಾರು 20 ದೇಶಗಳಿಗೆ ವ್ಯಾಪಿಸಿದೆ. ಶುಕ್ರವಾರ ರಷ್ಯಾದಲ್ಲಿ ಈ ಸೋಂಕಿನ ಎರಡು ಪ್ರಕರಣಗಳು ದಾಖಲಾಗಿದೆ.