ಬೀಜಿಂಗ್, ಜ 31 ಚೀನಾದ 31 ಪ್ರಾಂತ್ಯಗಳಲ್ಲಿ ಉಲ್ಬಣಿಸಿದ ಮಾರಕ ಕರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 213ಕ್ಕೆ ಏರಿದ್ದು, 9,692 ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶುಕ್ರವಾರ ಪ್ರಕಟಿಸಿದೆ. ‘ಜ 30ರ ಮಧ್ಯರಾತ್ರಿವರೆಗೆ 31 ಪ್ರಾಂತ್ಯಗಳಿಂದ 9,692 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 1,527 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, 213 ಮಂದಿ ಮೃತಪಟ್ಟಿದ್ದಾರೆ. 171 ಜನರು ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ.’ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಗುರುವಾರ ಹೊಸದಾಗಿ 1,982 ಪ್ರಕರಣಗಳು ಧೃಡಪಟ್ಟಿದ್ದರೆ, ಶಂಕಿತ ಹೊಸ 4,812 ಪ್ರಕರಣಗಳು, 43 ಸಾವುಗಳ ಪೈಕಿ 42 ಹುಬೈ ಪ್ರಾಂತ್ಯದಲ್ಲಿ, ಹಿಲಾಂಗ್ ಜಿಯಾಂಗ್ ನಲ್ಲಿ ಒಂದು ಸಾವು ಸಂಭವಿಸಿದೆ. ಗುರುವಾರ 4,201 ಜನರು ವೈದ್ಯಕೀಯ ಪರಿವೀಕ್ಷಣೆ ನಂತರ ಮನೆಗಳಿಗೆ ತೆರಳಿದ್ದರೆ, ಇನ್ನೂ 102,427 ಜನರು ಇನ್ನೂ ವೈದ್ಯಕೀಯ ಪರಿವೀಕ್ಷಣೆಯಲ್ಲಿದ್ದಾರೆ. 2002-2003 ನೇ ಸಾಲಿನಲ್ಲಿ ಉಲ್ಬಣಿಸಿದ್ದ ಉಸಿರಾಟ ತೊಂದರೆಯ ಸಾರ್ಸ್ ಸೋಂಕಿನ ಪ್ರಕರಣಗಳಿಂತ ಕರೋನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.