ಬೀಜಿಂಗ್, ಜನವರಿ 25, ಕೊರೊನಾವೈರಸ್ ನಿಂದ 1,287 ನ್ಯುಮೋನಿಯಾ ಪ್ರಕರಣಗಳು, ದಾಖಲಾಗಿದ್ದು, ಈವರೆಗೆ 41 ಸಾವಿನ ಪ್ರಕರಣಗಳು ವರದಿಯಾಗಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಶನಿವಾರ ಪ್ರಕಟಿಸಿದ್ದಾರೆ. ಇವುಗಳ ಪೈಕಿ 237 ಪ್ರಕರಣಗಳು ಬಹಳ ಗಂಬೀರವಾಗಿದೆ ಎಂದೂ ಹೇಳಲಾಗಿದೆ.ನ್ಯುಮೋನಿಯಾ ಪರಿಸ್ಥಿತಿಯು ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ 39, ಉತ್ತರ ಚೀನಾದ ಹೆಬೀ ಪ್ರಾಂತ್ಯದಲ್ಲಿ ಮತ್ತು ಈಶಾನ್ಯ ಚೀನಾದ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ತಲಾ ಒಂದು ಸಾವು ಸೇರಿದಂತೆ ಈವರೆಗೆ ಒಟ್ಟು 41 ಸಾವುಗಳಿಗೂ ಕಾರಣವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಒಟ್ಟು 1,965 ಶಂಕಿತ ಪ್ರಕರಣಗಳು ಸಹ ವರದಿಯಾಗಿವೆ.