ಅಂಕಾರಾ, ಏ.25, ಟರ್ಕಿಯಲ್ಲಿ 3,122 ಹೊಸ ಕೊರೊನಾ ಸೋಂಕಿತರು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,04,912 ಕ್ಕೆ ಏರಿದೆ. ಒಟ್ಟು 3,122 ಹೊಸ ಕೊರೊನಾ ಪ್ರಕರಣ ವರದಿಯಾಗಿವೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹರ್ಟಿನ್ ಕೋಕಾ ಶುಕ್ರವಾರ ಹೇಳಿದ್ದಾರೆ. 109 ಹೊಸ ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 2600 ಕ್ಕೆ ಏರಿದೆ.ಕಳೆದ 24 ಗಂಟೆಗಳಲ್ಲಿ, 38,351 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಿಂದ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 8,30,252 ಕ್ಕೆ ಹೆಚ್ಚಿಸಿದೆ.ಟರ್ಕಿಯಲ್ಲಿ ಒಟ್ಟು 21,737 ರೋಗಿಗಳು ಈ ಕಾಯಿಲೆಯಿಂದ ಗುಣಮುಖರಾಗಿದ್ದರೆ. 1,790 ರೋಗಿಗಳನ್ನು ತೀವ್ರ ನಿಗಾ ಘಟಕಗಳಿಗೆ ಇರಿಸಲಾಗಿದೆ. ಮಾರ್ಚ್ 11 ರಂದು ಟರ್ಕಿಯಲ್ಲಿ ಕೋವಿಡ್ -19 ರ ಮೊದಲ ಪ್ರಕರಣ ವರದಿಯಾಗಿದೆ.