ನವದೆಹಲಿ, ಏ 27, ದೇಶದಲ್ಲಿ ಕಳದೆ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1,396 ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿದೆ.ಮತ್ತು 48 ಮಂದಿ ಮೃತಪಟ್ಟಿದ್ದಾರೆ. ಪರಿಣಾಮ ಈವರೆಗೆ ಸೋಂಕಿತರ ಸಂಖ್ಯೆ 27,892 ಕ್ಕೆ ಏರಿಕೆಯಾಗಿದ್ದು, 872 ಮಂದಿ ಸಾವನ್ನಪ್ಪಿದ್ದಾರೆ. 6,185 ಜನರು ಗುಣಮುಖರಾಗಿದ್ದಾರೆ , 20,835 ಜನರು ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬೆಳಿಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಈವರೆಗೆ 8,068 ಜನರಿಗೆ ಸೋಂಕು ತಗುಲಿದ್ದು, 342 ಜನರು ಮೃತಪಟ್ಟಿದ್ದಾರೆ. ಗುಜರಾತ್ ನಲ್ಲಿ 3,301 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 151 ಜನ, ದೆಹಲಿಯಲ್ಲಿ ಸೋಂಕಿನ 2,918 ಪ್ರಕರಣಗಳ ಪೈಕಿ ಈವರೆಗೆ 54 ಮಂದಿ ಮೃತಪಟ್ಟಿದ್ದಾರೆ.