ಕೇಪ್ ಟೌನ್, ಮೇ 9, ದಕ್ಷಿಣ ಆಫ್ರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚಿನ 663 ಹೊಸ ಕರೋನ ಸೋಂಕು ಪ್ರಕರಣ ವರದಿಯಾಗಿದೆ. ಇದು ಮಾರ್ಚ್ 5 ರಿಂದ ದೇಶದಲ್ಲಿ ಮೊದಲ ಪ್ರಕರಣವನ್ನು ವರದಿಯಾದ ನಂತರ ಕಂಡು ಬಂದ ಹೆಚ್ಚು ಪ್ರಕರಣಗಳ ಸಂಖ್ಯೆಯಾಗಿದೆ. ಈ ನಡುವೆ ಇನ್ನೂ ಹೊಸದಾಗಿ 17 ಕರೋನ ರೋಗಿಗಳು ಮೃತಪಟ್ಟಿದ್ದು ಈವರೆಗೆ ಮೃತರ ಸಂಖ್ಯೆ 178 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವ ಜ್ವೆಲಿ ಮ್ಖೈಜ್ ತಿಳಿಸಿದ್ದಾರೆ.ಗುರುವಾರದ ವೇಳೆಗೆ, ದೇಶದಲ್ಲಿ 435 ಕರೋನ ರೋಗಿಗಳು ಆಸ್ಪತ್ರೆಯಲ್ಲಿದ್ದರೆ, 77 ಮಂದಿಯನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಸಚಿವರು ತಿಳಿಸಿದ್ದಾರೆ.ಇಲ್ಲಿಯವರೆಗೆ ಒಟ್ಟು 307,752 ಪರೀಕ್ಷೆ ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 15,599 ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ. . ಪಶ್ಚಿಮ ಕೇಪ್ ಪ್ರಾಂತ್ಯವು 4,497 ಪ್ರಕರಣಗಳು ಮತ್ತು 88 ಸಾವಿನೊಂದಿಗೆ ಸಾಂಕ್ರಾಮಿಕ ರೋಗದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.