ಕರೋನ : ಮಹಾರಾಷ್ಟ್ರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಲಗಾಮು..!!

ಮುಂಬೈ , ಮೇ  23, ಮಹಾರಾಷ್ಟ್ರದಲ್ಲಿ ಕೊರೋನಾ  ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು   ಸರಕಾರಕ್ಕೆ ಬಹಳ ಪೇಚಾಟದ  ಪ್ರಶ್ನೆಯಾಗಿದೆ.ಕೊರೋನಾ ರೋಗಿಗಳ ತ್ವರಿತ ಚಿಕಿತ್ಸೆಗಾಗಿ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳು  ಶೇಕಡಾ 80ರಷ್ಟು ಬೆಡ್ ಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡುವಂತೆ  ಸರ್ಕಾರ ಆದೇಶ ಹೊರಡಿಸಿದೆ. ಮುಂಬೈನಗರವೊಂದರಲ್ಲೇ  ನಾಲ್ಕು ಸಾವಿರ  ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಕೊರೋನಾಗೆ ಮೀಸಲಿಟ್ಟಿದೆ.ಇದಲ್ಲದೆ ಆರೋಗ್ಯ ಸೇವೆಯವರ ಕೊರತೆ ನೀಗಿಸಿಕೊಳ್ಳಲು ಖಾಸಗಿಯಾಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರು ಮತ್ತು ಅರೇ ವೈದ್ಯಕೀಯ ಸಿಬ್ಬಂದಿಗಳು ಕಡ್ಡಾಯವಾಗಿ ಸರ್ಕಾರ ನಿಯೋಜಿಸಿದ ಆಸ್ಪತ್ರೆಗಳಲ್ಲಿ ಕೆಲಸ ಮಾಡಬೇಕೆಂದು ಮತ್ತೊಂದು ಆದೇಶ ಹೊರಡಿಸಿದೆ.  ಯಾರಾದರೂ ಈ ನಿಯಮ ಉಲ್ಲಂಘಿಸಿದರೆ ಅಂತಹ ಕ್ಲಿನಿಕ್ ಗಳ ಪರವಾನಿಗೆ ರದ್ದುಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.