ಐವರು ಸಂಸದರಿಗೂ ಅಮರಿಕೊಂಡ ಕರೋನ ಸೋಂಕು

ವಾಷಿಂಗ್ಟನ್, ಮಾರ್ಚ್ 28, ಅಮೆರಿಕದಲ್ಲಿ  ಕರೋನ ಸೋಂಕು ಬಹಳ  ವೇಗವಾಗಿ ಹಬ್ಬುತ್ತಿದ್ದು ಈವರೆಗೆ ಐವರು ಸಂಸದರು ಮಾರಕ ಜಾಢ್ಯಕ್ಕೆ  ತುತ್ತಾಗಿದ್ದಾರೆ.   ಕಾಂಗ್ರೆಸ್ಸಿಗ ಮೈಕ್ ಕೆಲ್ಲಿ ಅವರಿಗೂ ಕರೋನಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ  ದೃಡಪಟ್ಟಿದ್ದು ಅವರು  ಕರೋನ ಸೋಂಕಿಗೆ ತುತ್ತಾದ   ಐದನೇ ಸಂಸದರಾಗಿದ್ದಾರೆ  ಎಂದು ಕಾಂಗ್ರೆಸ್  ಕಚೇರಿ ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ವಾರದ ಆರಂಭದಲ್ಲಿ  ಸೌಮ್ಯ ಜ್ವರ ತರಹದ ರೋಗಲಕ್ಷಣ ಕಾಡಲು ಶುರುಮಾಡಿದ ನಂತರ  ವೈದ್ಯರನ್ನು ಸಂಪರ್ಕಿಸಿದ್ದು  ನನ್ನ ವೈದ್ಯರು ಕೋವಿಡ್  ಪರೀಕ್ಷೆಗೆ ಒಳಗಾಗುವಂತೆ ಆದೇಶಿಸಿದ್ದರು ನಂತರ ಈಗ  ಪರೀಕ್ಷೆಯ ನಂತರ ವರದಿ ಬಂದಿದ್ದು ಪಾಸಿಟಿವ್ ಬಂದಿದೆ  ಎಂದೂ  ಕೆಲ್ಲಿ  ತಿಳಿಸಿದ್ದಾರೆ.ರೋಗಲಕ್ಷಣಗಳು ಸೌಮ್ಯವಾಗಿದ್ದು  ಪೂರ್ಣ ಚೇತರಿಕೆಯಾಗುವವರೆಗೂ  ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಶುಕ್ರವಾರದಂದು  2 ಟ್ರಿಲಿಯನ್ ಪರಿಹಾರ  ಪ್ಯಾಕೇಜ್ ಅನ್ನು ಅನುಮೋದಿಸಲು, ಸಮಯದಲ್ಲಿ ಸದನದಲ್ಲಿ ಹಾಜರಿದ್ದು  ಮತ ಚಲಾಯಿಸಲು  ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದೂ  ಹೇಳಿಕೊಂಡಿದ್ದರು .