ಬೆಂಗಳೂರು, ಏ 9,ರಾಜ್ಯದಲ್ಲಿ 4 ವರ್ಷದ ಮಗು ಸೇರಿದಂತೆ ಗುರುವಾರ ಮಧ್ಯಾಹ್ನ ಒಟ್ಟು 10 ಜನರಿಗೆ ಕೊರೋನಾ ಸೋಂಕು ತಗುಲಿದೆ. ಗದಗಿನ 80 ವರ್ಷದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 191ಕ್ಕೇರಿಕೆಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. 28 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.ಬೆಳಗಾವಿಯ 50 ವರ್ಷದ ವ್ಯಕ್ತಿ, ಮೈಸೂರಿನ 55 ಹಾಗೂ 68 ವರ್ಷದ ವ್ಯಕ್ತಿಗಳು, ನಂಜನಗೂಡಿನ ಔಷಧ ಕಂಪನಿಯ ಉದ್ಯೋಗಿಯ ಸಹ ಪ್ರಯಾಣಿಕನಾಗಿದ್ದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆಯ 165ನೇ ರೋಗಿಯ 4 ವರ್ಷದ ಪುತ್ರ, 13 ವರ್ಷದ ಸಂಬಂಧಿಕರ ಗಂಡುಮಗು ಮತ್ತು 9 ವರ್ಷದ ಹೆಣ್ಣುಮಗುವಿಗೂ ಸೋಂಕು ತಗುಲಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ದೆಹಲಿ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿರುವ 19 ವರ್ಷದ ಹೆಣ್ಣು ಹಾಗೂ 27 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ 48 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.