ಕರೋನ ವಿರುದ್ಧ ಅಮೆರಿಕ ಸಮರ, 484 ಬಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್

ವಾಷಿಂಗ್ಟನ್, ಎಪ್ರಿಲ್ 22,ಕರೋನ ವಿರುದ್ದ ತೀವ್ರ ಹೋರಾಟ ಮಾಡುತ್ತಿರುವ ಅಮೆರಿಕ  ನೆಟ್ ಸಣ್ಣ ಉದ್ಯಮಗಳ ಚೇತರಿಕೆ,  ಆಸ್ಪತ್ರೆಗಳ ಸಂಖ್ಯೆ   ಹೆಚ್ಚಳ ಮತ್ತು ಜನರಿಗೆ ಬೇಕಾದ  ಚಿಕಿತ್ಸಾಸೌಲಭ್ಯ ಮತ್ತು ಕರೋನ  ಪರೀಕ್ಷೆಗಾಗಿ   484 ಬಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಅನ್ನು ಅಂಗೀಕರಿಸಿದೆ.ಡೆಮೊಕ್ರಟಿಕ್ ಸದಸ್ಯರು  ಟ್ರಂಪ್ ಆಡಳಿತದೊಂದಿಗೆ ಒಪ್ಪಂದಕ್ಕೆ ಬಂದ ನಂತರ ಪರಿಹಾರ  ಪ್ಯಾಕೇಜ್ ಗೆ  ಧ್ವನಿ ಮತದ ಒಪ್ಪಿಗೆ ದೊರಕಿದ್ದು,  ಸೆನೆಟ್ ಮತದಾನದ ನಂತರ ಇದಕ್ಕೆ  ಗುರುವಾರದೊಳಗೆ  ಕಾನುನು ಬದ್ದ  ಅನುಮೋದನೆ ಸಿಗಲಿದೆ. "ಸೆನೆಟ್ ಅಮೆರಿಕಾದ ಜನತೆಯ ಪರವಾಗಿ ನಿಂತಿದೆ, ಕೇರ್ಸ್ ಕಾಯ್ದೆ ಜಾರಿಗೆ ಬರುವುದನ್ನು ನಿರೀಕ್ಷಿಸುತ್ತಿದೆ ಮತ್ತು ಉತ್ತಮ  ಕಾರ್ಯಕ್ರಮಗಳನ್ನು ಮುಂದುರಿಸಲು ಅಗತ್ಯ ಹಣವನ್ನು ಸೇರಿಸಲಿದೆ  ಎಂದು   ಮಿಚ್ ಮೆಕ್ಕಾನ್ನೆಲ್ ಮತದಾನದ ಮೊದಲು ಹೇಳಿದ್ದಾರೆ ."ನಮ್ಮ ಒಪ್ಪಂದದ ತಿರುಳಿನ ಪ್ರಕಾರ ಇದು ಲಕ್ಷಾಂತರ ಸಣ್ಣ ಉದ್ಯಮಗಳಿಗೆ ಇದು ನೆರವಾಗಲಿದೆ,  ಸಹಾಯವಾಗಲಿದೆ ಎಂದು ಅವರು  ಹೇಳಿದರು. ಆರ್ಥಿಕ  ವಿಪತ್ತು ಸಾಲಗಳಿಗೆ 60 ಬಿಲಿಯನ್ ಡಾಲರ್, ಆಸ್ಪತ್ರೆಗಳಿಗೆ 75 ಬಿಲಿಯನ್ ಡಾಲರ್ ಮತ್ತು ಪರೀಕ್ಷೆಯನ್ನು ದೇಶಾದ್ಯವಿಸ್ತರಿಸಲು 25 ಬಿಲಿಯನ್ ಡಾಲರ್ ಅನ್ನು ಈ ಪರಿಹಾರ ಪ್ಯಾಕೇಜ್  ಒಳಗೊಂಡಿದೆ.