ಕೇಪ್ ಟೌನ್, ಮಾರ್ಚ್ 27, ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಾಣು ಸೋಂಕು
ಹರಡದಂತೆ ತಡೆಗಟ್ಟಲು ಮೂರು ವಾರಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಶುಕ್ರವಾರ
ಆರಂಭವಾಗಿದೆ.
ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ಎಲ್ಲ ವಸ್ತುಗಳ ಸಾಗಣೆ ಮೇಲೆ ನಿರ್ಬಂಧ ಹೇರಲಾಗಿದೆ. ಸೇನಾಪಡೆ ಮತ್ತು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ಜನರು ಅಗತ್ಯ ವಸ್ತುಗಳನ್ನು
ಸಂಗ್ರಹಿಸಿಟ್ಟುಕೊಳ್ಳಲು ಸೂಪರ್ ಮಾರ್ಕೆಟ್ ಗಳಿಗೆ ಮುಗಿದುಬಿದ್ದರು. ಇನ್ನು ಕೆಲವರು
ತಮ್ಮ ತಮ್ಮ ಊರು ಸೇರಿಕೊಳ್ಳಲು ಸಿದ್ಧರಾದರು. ಇದರಿಂದಾಗಿ ವೈರಾಣು ಹರಡುವ ಭೀತಿ
ಇನ್ನಷ್ಟು ಹೆಚ್ಚಾಯಿತು. ಆಫ್ರಿಕಾ ಖಂಡದಲ್ಲಿ ಅತಿ ಹೆಚ್ಚು 927 ಪ್ರಕರಣಗಳು ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿವೆ. ಆದರೆ ಈವರೆಗೆ ಈ ಸೋಂಕಿನಿಂದಾಗಿ ಯಾರೂ ಮೃತಪಟ್ಟಿಲ್ಲ.ಸೈನಿಕರನ್ನು ನಿಯೋಜನೆ ಮಾಡುವ ಮುನ್ನ ಅವರನ್ನು ಗುರುವಾರ ತಡಸಂಜೆ ಅಧ್ಯಕ್ಷ ಸಿರಿಲ್ ರಾಮಫೋಸಾ ಭೇಟಿಯಾದರು.ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. 100 ಜನಕ್ಕೂ
ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದೂ ನಿರ್ಬಂಧ ವಿಧಿಸಲಾಗಿತ್ತು.ನಿಯಮ ಉಲ್ಲಂಘಿಸುವವರಿಗೆ ಆರು ತಿಂಗಳ ಸೆರೆಮನೆವಾಸ ಅಥವಾ ಬಾರಿ ದಂಡ ವಿಧಿಸಬಹುದಾಗಿದೆ ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ.