ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ

ಮಾಸ್ಕೋ, ಫೆ 26, ಚೀನಾದಲ್ಲಿ  ಮಾರಣಾಂತಿಕ  ಕರೋನಾ ವೈರಸ್   ಸೋಂಕಿನಿಂದ ಮೃತಪಟ್ಟವರ  ಸಂಖ್ಯೆ 2,715  ಏರಿಕೆಯಾಗಿದೆ.   ಸೋಂಕು  ತಗುಲಿದವರ  ಪ್ರಮಾಣ  78,000 ಮೀರಿದೆ.  29,700 ಕ್ಕೂ ಹೆಚ್ಚು  ಮಂದಿ  ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ  ಎಂದು  ಚೀನಾದ ರಾಷ್ಟ್ರೀಯ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.ಚೈನಾದ  31 ಪ್ರಾಂತ್ಯಗಳಲ್ಲಿ  ಲಭ್ಯವಾಗಿರುವ   ಇತ್ತಿಚಿನ  ಅಂಕಿ ಅಂಶಗಳ  ಅನ್ವಯ  78, 064  ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು,  2, 715 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 29 745 ಮಂದಿ ಚೇತರಿಸಿಕೊಂಡಿದ್ದಾರೆ. ಹುಬೈ ಪ್ರಾಂತ್ಯದಲ್ಲಿ  ಕಳೆದ  24 ಗಂಟೆಗಳಲ್ಲಿ 401  ಹೊಸ ಪ್ರಕರಣಗಳು ದಾಖಲಾಗಿದ್ದು, 52 ಮಂದಿ ಮೃತಪಟ್ಟಿದ್ದಾರೆ.