ಕರೋನ ಸಂಕಷ್ಟ: ಕೆನಾಡದಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟ

ಟೊರೊಂಟೊ, ಎಪ್ರಿಲ್ 30 (ಸ್ಪುಟ್ನಿಕ್) ಕರೊನ ಹಾವಳಿಯ ಕಾರಣದಿಂದ ಕೆಲಸ ಮಾಡಲಾಗದ 10 ಲಕ್ಷ ಜನರು    ಸರ್ಕಾರದಿಂದ  ತುರ್ತು ಆರ್ಥಿಕ ಪ್ರಯೋಜನ  ಪಡೆದಿದ್ದಾರೆ .ಇದೆ ಕಾರಣಕ್ಕಾಗಿ  ಕಳೆದ  ಮಾರ್ಚ್ ನಲ್ಲಿ  10 ಲಕ್ಷ  ಹೆಚ್ಚು ಕೆನಡಿಯನ್ನರು ಉದ್ಯೋಗ  ಕಳೆದುಕೊಂಡಿದ್ದಾರೆ ಎಂದು ಸ್ಟ್ಯಾಟಿಸ್ಟಿಕ್ಸ್ ಕೆನಡಾ ವರದಿ ಮಾಡಿದೆ. ತುರ್ತು ಪ್ರತಿಕ್ರಿಯೆ ಪ್ರಯೋಜನಕ್ಕಾಗಿ ಈವರೆಗೆ ಸಲ್ಲಿಕೆಯಾಗಿ ತಿಂಗಳಲ್ಲಿ   10.ಲಕ್ಷಕ್ಕೂ  ಹೆಚ್ಚಿನ ಅರ್ಜಿಗಳನ್ನು ಈಗಾಗಲೆ ಪ್ರಕ್ರಿಯೆಗೊಳಿಸಲಾಗಿದೆ  ಎಂದೂ ಸಚಿವರೊಬ್ಬರು ಹೇಳಿದ್ದಾರೆ. ಈ ವಾರದಲ್ಲಿ  ಸಹಾಯಕ್ಕಾಗಿ ಸಲ್ಲಿಕೆ ಮಾಡಿರುವ ಅರ್ಜಿಗಳು ಸಹ ಇದರಲ್ಲಿ ಸೇರಿದೆ ಎಂದು ಅವರು  ಹೇಳಿದ್ದಾರೆ ಉದ್ಯೋಗ ವಿಮೆ ಮತ್ತು ಅನಾರೋಗ್ಯದ ಪ್ರಯೋಜನಗಳಿಗಾಗಿ ಅರ್ಜಿ ಸಲ್ಲಿಸಿದವರು ಆದರೆ ನಂತರ ಕೆನಡಾದ ತುರ್ತು ಪ್ರತಿಕ್ರಿಯೆ ಲಾಭದ ಕಾರ್ಯಕ್ರಮಕ್ಕೆ ಏಪ್ರಿಲ್ 6 ರಂದು ವರ್ಗಾಯಿಸಲ್ಪಟ್ಟರು ಇದರಲ್ಲಿ ಸೇರಿದ್ದಾರೆ ಎಂದು ಉದ್ಯೋಗ ಮತ್ತು ಸಾಮಾಜಿಕ ಅಭಿವೃದ್ಧಿ ಕೆನಡಾ ಕಳೆದ ವಾರ ಸ್ಪುಟ್ನಿಕ್ಗೆ ತಿಳಿಸಿದೆ.31 ಮಿಲಿಯನ್ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಕೆನಡಾವು 20 ಮಿಲಿಯನ್ ಜನರ ಕಾರ್ಮಿಕ ಬಲವನ್ನು ಹೊಂದಿದೆ.ಕಳೆದ  ಮಾರ್ಚ್ ನಲ್ಲಿ  10 ಲಕ್ಷ  ಹೆಚ್ಚು ಕೆನಡಿಯನ್ನರು  ಉದ್ಯೋಗ  ಕಳೆದುಕೊಂಡಿದ್ದಾರೆ ಎಂದು ಸ್ಟ್ಯಾಟಿಸ್ಟಿಕ್ಸ್ ಕೆನಡಾ ವರದಿ ಮಾಡಿದೆ.