ವಾಷಿಂಗ್ಟನ್, ಏ 16,ಅಮೆರಿಕದಲ್ಲಿ ಕೊರೊನಾ ವೈರಾಣು ಸೋಂಕಿನಿಂದ 30 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಅಮೆರಿಕದಲ್ಲಿ 30,844 ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದು 6,38,111 ಜನರಲ್ಲಿ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 2500 ಕ್ಕೂ ಹೆಚ್ಚು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಅಮೆರಿಕದಲ್ಲಿ 52,640 ಜನರು ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸೋಂಕಿಗೆ ತಕ್ಷಣದ ಕ್ರಮ ಕೈಗೊಳ್ಳದ ಆಡಳಿತ ವೈಫಲ್ಯದಿಂದಾಗಿ ಅಲ್ಲಿ ಸೋಂಕು ಪರೀಕ್ಷಾ ಕೇಂದ್ರಗಳೂ ಸಾಕಷ್ಟು ಪ್ರಮಾಣದಲ್ಲಿಲ್ಲ. ಆರ್ಥಿಕತೆ ಚೇತರಿಕೆಗೆ ವ್ಯಾಪಾರ ವಹಿವಾಟು ಪುನರಾರಂಭಿಸುವ ಚಿಂತನೆಯೂ ಈಗ ಕೈಗೂಡುವುದು ಸಾಧ್ಯವಾಗದು ಎಂದು ಹೇಳಲಾಗಿದೆ.