ಮಾಸ್ಕೋ, ಎಪ್ರಿಲ್ 5, ಅಕ್ಟೋಬರ್‌ನಲ್ಲಿ ದುಬೈನಲ್ಲಿ ನಡೆಯಬೇಕಿದ್ದ ವರ್ಲ್ಡ್ ಎಕ್ಸ್‌ಪೋ 2020 ವನ್ನು ಕರೋನ ಹಿನ್ನಲೆಯಲ್ಲಿ ಈ ವರ್ಷದ ಅಕ್ಟೋಬರ್‌ನಿಂದ ಮುಂದಿನ ವರ್ಷದ 2021 ರ ಅಕ್ಟೋಬರ್‌ಗೆ ಮುಂದೂಡುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಬ್ಯೂರೋ ಇಂಟರ್ನ್ಯಾಷನಲ್ ಡೆಸ್ ಎಕ್ಸ್‌ಪೊಸಿಶನ್ಸ್ (ಬಿಐಇ) ಗೆ ಮನವಿ ಮಾಡಿದೆ.
"ಭಾಗವಹಿಸುವ ದೇಶಗಳಿಗೆ ಒಗ್ಗಟ್ಟಿನಲ್ಲಿ, ಬಿಐಇ ಮತ್ತು ಎಕ್ಸ್‌ಪೋ 2020 ಸ್ಟೀರಿಂಗ್ ಸಮಿತಿಯೊಂದಿಗೆ ಚರ್ಚೆಯ ನಂತರ , ಯುಎಇ ಸರ್ಕಾರವು ಎಕ್ಸ್‌ಪೋ 2020 ದುಬೈ ದಿನಾಂಕಗಳನ್ನು 1 ಅಕ್ಟೋಬರ್ 2021 - 31 ಮಾರ್ಚ್ 2022 ಕ್ಕೆ ಬದಲಾಯಿಸುವಂತೆ ಬಿಐಇಗೆ ತಿಳಿಸಿದೆ ಎಂದು ಸಂಸ್ಥೆ ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದೆ. 2013 ರಲ್ಲಿ ದುಬೈ ಅನ್ನು ಅಂತಾರಾರಾಷ್ಟ್ರೀಯ ಪ್ರದರ್ಶನದ ಆತಿಥೇಯರನ್ನಾಗಿ ನೇಮಿಸಲಾಗಿತ್ತು . ಈ ವರ್ಷ ದುಬೈನಲ್ಲಿ ನಡೆಯುವ ಎಕ್ಸ್‌ಪೋಗೆ ಎರಡು ಕೋಟಿ ಜನರು ಭೇಟಿ ನೀಡುತ್ತಾರೆ ಎಂದು ಯುಎಇ ನಿರೀಕ್ಷಿಸಿತ್ತು ಪ್ರದರ್ಶನದಲ್ಲಿ 190 ದೇಶಗಳು ತಮ್ಮ ಯೋಜನೆಗಳನ್ನು ಪ್ರದರ್ಶಿಸುವ ನಿರೀಕ್ಷೆಯಿತ್ತು. ಈ ಕಾರ್ಯಕ್ರಮವನ್ನು ಏಪ್ರಿಲ್ 10, 2021 ರವರೆಗೆ ನಡೆಸಬೇಕಿತ್ತು. 1931 ರಲ್ಲಿ ಸ್ಥಾಪನೆಯಾದ ಬ್ಯೂರೋ ಇಂಟರ್ನ್ಯಾಷನಲ್ ಡೆಸ್ ಎಕ್ಸ್‌ಪೊಸಿಶನ್ಸ್ , ವರ್ಲ್ಡ್ ಎಕ್ಸ್‌ಪೋ ಆತಿಥೇಯ ಪ್ರದರ್ಶನಗಳನ್ನು ಆಯ್ಕೆ ಮಾಡುತ್ತದೆ, ಬಿಡ್‌ಗಳ ಬಗ್ಗೆ ತೀರ್ಮಾನಗಳನ್ನು ನೀಡುತ್ತದೆ, ಸಲ್ಲಿಸಿದ ಯೋಜನೆಗಳನ್ನು ನಿರ್ಣಯಿಸುತ್ತದೆ ಮತ್ತು ಪ್ರದರ್ಶನಗಳ ಪ್ರಗತಿ ಮತ್ತು ಫಲಿತಾಂಶಗಳನ್ನು ವಿಶ್ಲೇಷಿಸುತ್ತದೆ.ವಿಶ್ವ ಆರೋಗ್ಯ ಸಂಸ್ಥೆ ಕಳದೆ 11 ರಂದು ಕೋವಿಡ್ -19 ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವದಾದ್ಯಂತ ದೃಡಪಡಿಸಿದ ಕರೋನವೈರಸ್ ಪ್ರಕರಣಗಳ ಸಂಖ್ಯೆ 1,192,000 ಮೀರಿದೆ, ಅವುಗಳಲ್ಲಿ 64,316 ಜನರು ಈವರೆಗೆ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.