ಗದಗ 21: ಗ್ರಾಮೀಣ ಭಾಗದ ಜನರು ಹೊಲ-ಮನಿಗಳಲ್ಲಿ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಕೈಗೊಳ್ಳುವಾಗ ಕಡ್ಡಾಯವಾಗಿ ಮಾಸ್ಕ್ ದರಿಸಬೇಕು, ಒಬ್ಬರಿಗೊಬ್ಬರು ಕನಿಷ್ಠ ಒಂದು ಮೀಟರ್ ದೂರವಿರಬೇಕು, ಮೇಲಿಂದ ಮೇಲೆ ಕೈ ತೊಳೆದುಕೊಳ್ಳಬೇಕು, ಮನೆಯಲ್ಲಿಯೂ ಸಹ ಅಂತರ ಕಾಯ್ದುಕೊಳ್ಳಬೇಕು, ಮಕ್ಕಳನ್ನು ಹಾಗೂ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ, ಅನಗತ್ಯವಾಗಿ ಹೊರಗೆ ಓಡಾಡಬೇಡಿ, ಈ ರೋಗಕ್ಕೆ ನಿಧರ್ಿಷ್ಟವಾದ ಔಷದ ಇಲ್ಲದ್ದರಿಂದ ಮನೆಯಲ್ಲಿಯೇ ಸುರಕ್ಷಿತವಾಗಿರುವುದು ಅತೀ ಅವಶ್ಯ. ಪ್ರತಿಯೊಬ್ಬ ಸಾರ್ವಜನಿಕರು ಸಕರ್ಾರದ ಆದೇಶ ಪಾಲಸಿದಾಗ ಮಾತ್ರ ನಾವು ಕರೋನಾ ಮಹಾ ಹೆಮ್ಮಾರಿಯಿಂದ ಪಾರಾಗಲು ಸಾದ್ಯ, ಗ್ರಾಮದ ಜನರಿಗೆಲ್ಲರೂ ಆರೋಗ್ಯದಿಂದ ಇರಲಿ ಚೆನ್ನಾಗಿ ಇರಲಿ ಎಂಬ ಸದುದ್ದೇಶದಿಂದ ಹತರ್ಿ ಗ್ರಾಮ ಪಂಚಾಯತಿ ವತಿಯಿಂದ ಕಣವಿ ಗ್ರಾಮಕ್ಕೆ 4000 ಹಾಗೂ ಹತರ್ಿ ಗ್ರಾಮಕ್ಕೆ 8000 ಮಾಸ್ಕ್ಗಳನ್ನು ಮನಿಯಲ್ಲಿಯೇ ತಯಾರು ಮಾಡಿದ ಮಾಸ್ಕ್ಗಳನ್ನು ಹಂಚಲಿಕ್ಕೆ ಕ್ರಮ ಕೈಗೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ.ಸಲಗರೆ ಅವರು ಕಣವಿ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಬದಲ್ಲಿ ಪಂಚಾಯತಿ ಸದಸ್ಯರಾದ ಬಾಬುಸಾಬ ಕಿಲ್ಲೇದಾರ, ಪರಮ್ಮ ಬಳಿಗೇರ, ಬಸಮ್ಮ ಬಾರಿಕಾಯಿ ಹಿರಿಯರಾದ ಎಸ್.ಪಿ.ಕುರ್ತಕೋಟಿ, ಎಸ್.ಜಿ. ಕೋರಿ ಪ್ರಕಾಶ ಕುರ್ತಕೋಟಿ, ಆರೋಗ್ಯ ಇಲಾಖೆಯ ಎ.ವಿ.ಶೇಠ, ರೇಷ್ಮಾ ಹಾಳಕೇರಿ, ನಾಗಪ್ಪ ದ್ಯಾವಣ್ಣವರ ಹಾಗೂ ಆಶಾ ಕಾರ್ಯಕತರ್ೆಯರು ಉಪಸ್ಥಿತರಿದ್ದರು.
ನಂತರ ಗ್ರಾಮ ಪಂಚಾಯತಿ ಹತರ್ಿಯಲ್ಲಿ 8000 ಮಾಸ್ಕ್ ವಿತರಣೆಗೆ ನ್ಯಾಯಾಧೀಶರು ಚಾಲನೆ ನೀಡಿ ಲಾಕಡೌನ್ ಕಟ್ಟು ನಿಟ್ಟಾಗಿ ಪಾಲಿಸಿ ರಕ್ಷಣೆ ಹೊಂದಿರಿ ಎಂದು ನುಡಿದರು. ಈ ಸಂದರ್ಬದಲ್ಲಿ ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ಸೋಮೇಶ್ವರ ರಡ್ಡೇರ, ಸಿದ್ದಪ್ಪ ಜೊಂಡಿ, ಸದಸ್ಯರಾದ ಜಯದಾ ವಡ್ಡಟ್ಟಿ, ಪ್ರಕಾಶ ಲದ್ದಿ ಉಪಸ್ಥಿತರಿದ್ದರು. ನರೇಗಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಾಬ್ಕಾಡರ್್ ಇದ್ದವರಿಗೆ ಅಂತರ ಕಾಯ್ದುಕೊಂಡು ಕೆಲಸ ನೀಡಲು ಹಾಗೂ ಗ್ರಾಮಗಳಲ್ಲಿ ಡಿಡಿಟಿ ಸಿಂಪಡಿಸಿ ಸ್ವಚ್ಛತೆ ಕಾಪಾಡಿಕೊಳ್ಳಲು ಪಿಡಿಒ ಶಿವಲೀಲಾ ಅಂಗಡಿ ಅವರಿಗೆ ಸೂಚನೆ ನೀಡಿದರು.