ಬೆಂಗಳೂರು, ಮಾ.20, ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಟ್ರೈನ್ ಟಿಕೆಟ್ ಗಳನ್ನು ಪ್ರಯಾಣಿಕರು ರದ್ದುಗೊಳಿಸುತ್ತಿರುವುದು ಕಳೆದ 2 ವಾರಗಳಿಂದ ಅಧಿಕವಾಗುತ್ತಿದೆ ಎಂದು ಕನ್ಫರ್ಮ್ ಟಿಕೆಟ್ ಸಂಸ್ಥೆಯ ಸಹ ಸಂಸ್ಥಾಪಕ ದಿನೇಶ್ ಕೋಥಾ ತಿಳಿಸಿದ್ದಾರೆ.ಖಚಿತ ಟ್ರೈನ್ ಟಿಕೆಟ್ ಪಡೆಯಲು ಕನ್ಫರ್ಮ್ ಟಿಕೆಟ್ ಅತ್ಯಂತ ಜನಪ್ರಿಯ ವೇದಿಕೆಯಾಗಿದ್ದು, ಈ ವೇದಿಕೆ ಬಳಸಿ ಬುಕಿಂಗ್ ಮಾಡಿದ ಗ್ರಾಹಕರು ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ತಮ್ಮ ಖಚಿತವಾದ ಟಿಕೆಟ್ ಗಳನ್ನು ಕ್ಯಾನ್ಸಲ್ ಮಾಡುತ್ತಿದ್ದಾರೆ.
ಕೆಳೆದ 2 ದಿನದಲ್ಲಿ ಶೇಕಡ 37ರಿಂದ 52ರಷ್ಟು ಗ್ರಾಹಕರು ಟ್ರೈನ್ ಟಿಕೆಟ್ ಗಳನ್ನು ಕನ್ಫರ್ಮ್ ಟಿಕೆಟ್ ವೇದಿಕೆ ಬಳಸಿ ಕ್ಯಾನ್ಸಲ್ ಮಾಡುತ್ತಿದ್ದಾರೆ. ಡೆಲ್ಲಿ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್ ಮತ್ತ ಚೆನ್ನೈ ಮಾರ್ಗಗಳ ಟಿಕೆಟ್ ಗಳು ಅತೀ ಹೆಚ್ಚು ರದ್ದು ಪಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಪಾಟ್ನ, ಚೆನ್ನೈ ಮಾರ್ಗ, ಮುಂಬೈ - ನಾಗಪುರ್ ಮಾರ್ಗ, ತಿರುಪತಿ ಸಿಕಂದರಬಾದ್ ಅಹ್ಮದಾಬಾದ್ ಮಾರ್ಗ ಮತ್ತು ಬೆಂಗಳೂರು-ಚೆನ್ನೈ ಹಾಗು ಚಂಡಿಗಡ- ದೆಹಲಿ ಮಾರ್ಗಗಳ ಟಿಕೆಟ್ ಗಳನ್ನು ಗ್ರಾಹಕರು ರದ್ದು ಮಾಡುತ್ತಿದ್ದಾರೆ. ಹೊಸ ಟಿಕೆಟ್ ಬುಕಿಂಗ್ ಕೂಡ ಶೇಕಡ 20 ರಷ್ಟು ಇಳಿಮುಖ ಕಂಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.