ಕೊರೊನ ಎಫೆಕ್ಟ್: ಬೀದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ

ಹುನಗುಂದ19: ಕೊರೊನಾ ವೈರಸ್ ಮಹಾಮಾರಿ ತಡೆಗಟ್ಟಲು ಜಿಲ್ಲಾಧಿಕಾರಿಗಳ ಆದೇಶದಂತೆ ಮುಂಜಾಗೃತಾ ಕ್ರಮವಾಗಿ ಪುರಸಭೆ ಮತ್ತು ಪಿಎಸೈ ನೇತೃತ್ವದಲ್ಲಿ ಬೀದಿ ವ್ಯಾಪಾರಸ್ಥರ ತೆರವು ಕಾಯರ್ಾಚರಣೆ ನಡೆಯಿತು.     ಗುರುವಾರ ನಗರದ ಪುರಸಭೆ ಮತ್ತು ಪೊಲೀಸ್ ಇಲಾಖೆ ಸಹಯೋದಲ್ಲಿ ಕೋವಿಡ್-19 ವೈರಾಣುಗಳಿಂದ ಹರಡುವ ಅಪಾಯಕಾರಿ ಸಾಂಕ್ರಾಮಿಕ ಮಹಾಮಾರಿ ಕೊರೊನಾ ರೋಗವನ್ನು ತಡೆಗಟ್ಟು ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯನ್ನು ಕಾಪಾಡಿಕೊಳ್ಳಲು ಮುಂಜಾಗೃತಾ ಕ್ರಮವಾಗಿ ತಾಲೂಕಿನಲ್ಲಿ ಜರುಗುವ ವಾರದ ಸಂತೆಗಳನ್ನು ನಿಷೇಧಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ತಿಳಿಸಿದ್ದಾರೆ. ಈ ಕ್ರಮವು ಮಾ.3ರಿಂದ 23ರವರೆಗೆ ಹಾಗೂ ಸಂದಭರ್ಾನುಸಾರ ಊಜರ್ಿತಾವಧಿ ವಿಸ್ತರಿಸುವ ಷರತ್ತುಗಳು ಒಳಪಟ್ಟಿವೆ ಎಂದರು.  ಜಿಲ್ಲಾಧಿಕಾರಿಗಳ ಮುಂದಿನ ಆದೇಶವಾಗುವವರೆಗೂ ಈ ಕ್ರಮ ಜಾರಿಯಲ್ಲಿದೆ.  ನಗರದ ಎಲ್ಲ ವ್ಯಾಪಾರಸ್ಥರು ಸ್ವಯಂಪ್ರೇರಣೆಯಿಂದ ಸಹಕರಿಸಬೇಕೆಂದು ಪಿಎಸ್ಐ ಪುಂಡಲಿಕ್ ಪಟಾತರ ತಿಳಿಸಿದರು.