ಕೊರೊನಾ ನಿರ್ಧರಣಾ ಪರೀಕ್ಷೆ ; ಭಾರತದಲ್ಲಿ ಈವರೆಗೆ ೧೮,೩೮೩ ಮಂದಿಗೆ ಮಾತ್ರ ಪರೀಕ್ಷೆ...!

ನವದೆಹಲಿ, ಮಾ ೨೪, ಪರೀಕ್ಷೆ, ಪರೀಕ್ಷೆ, ಪರೀಕ್ಷೆಗಳನ್ನು ನಡೆಸಿ.!   ಕೊರೊನಾ ವೈರಸ್ ವಿರುದ್ಧ ಸಮರ ನೆಡೆಸಲು  ಅತ್ಯಂತ  ಸೂಕ್ತ  ಹಾಗೂ ಅಗತ್ಯವಾಗಿರುವ  ಮಾರ್ಗ  ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅಧಾನಮ್ ಗೇಬ್ರಿಯಲ್ಸ್ ಮಾರ್ಚ್ ೧೬ ರಂದು ಜಗತ್ತಿಗೆ ಕರೆ ನೀಡಿದ್ದಾರೆ.  ಆದರೆ,  ಈ ನಿಟ್ಟಿನಲ್ಲಿ  ಭಾರತ ದೊಡ್ಡ ರೀತಿಯಲ್ಲಿ  ಸ್ಪಂದಿಸಿಲ್ಲ.  ಮಾರ್ಚ್ ೨೩ ರ ಹೊತ್ತಿಗೆ, ಭಾರತದಲ್ಲಿ ಕೇವಲ ೧೮,೩೮೩ ಜನರಿಗೆ ಮಾತ್ರ ಕೊರೊನಾ ವೈರಸ್ ನಿರ್ಧರಣ  ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ೪೩೩ ಜನರಿಗೆ ಕೋವಿಡ್-೧೯  ಸೋಂಕು ಇರುವುದು  ನಿರ್ಧರಣೆಯಾಗಿದೆ. ಸುಮಾರು ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರ, ಕೇರಳ ರಾಜ್ಯದಲ್ಲಿ ವರದಿಯಾಗಿವೆ.
 ಮಾರ್ಚ್ ೧೮ರವರೆಗೆ   ಇಟಲಿಯಲ್ಲಿ ೧,೬೫,೫೪೧ ಮಂದಿಗೆ,  ದಕ್ಷಿಣ ಕೊರಿಯಾದಲ್ಲಿ ೨,೯೫,೬೪೭ ಮಂದಿಗೆ ಕೊರೊನಾ ನಿರ್ಧರಣೆ ಪರೀಕ್ಷೆಗಳನ್ನು  ನಡೆಸಲಾಗಿದೆ.   ದಕ್ಷಿಣ ಕೊರಿಯಾ ಪ್ರತಿನಿತ್ಯ  ೨೦ ಸಾವಿರ ಜನರಿಗೆ  ರೋಗ ನಿರ್ಧರಣೆ  ಪರೀಕ್ಷೆಗಳನ್ನು ಉಚಿತವಾಗಿ ನಡೆಸುತ್ತಿದೆ.  ಬ್ರಿಟನ್ ದಿನಕ್ಕೆ ೧,೫೦೦ ಪರೀಕ್ಷೆಗಳನ್ನು ಮಾಡುತ್ತದೆ.  ಅಲ್ಲದೆ ನಿತ್ಯ ಹತ್ತು ಸಾವಿರ  ಮಂದಿಗೆ  ಪರೀಕ್ಷೆ   ನಡೆಸಲು  ಸಾಧ್ಯವಾಗುವಂತಹ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ.  ಆದರೆ,  ಭಾರತದಲ್ಲಿ   ಕೊರೊನಾ ಪರೀಕ್ಷೆಗಳು ಪರೀಕ್ಷೆಗಳು ಇಷ್ಟೊಂದು   ಕಡಿಮೆ ಸಂಖ್ಯೆಯಲ್ಲಿ  ಮುಂದುವರಿದರೆ, ಅದಕ್ಕೆ  ಸೂಕ್ತ  ಬೆಲೆ ತೆರೆಬೇಕಾಗುತ್ತದೆ  ಎಂದು ಪುಣೆಯ ಗ್ಲೋಬಲ್  ಹೆಲ್ತ್  ಬಯೋಟಿಕ್ಸ್   ಹೆಲ್ತ್ ಪಾಲಿಸಿ  ಸಂಶೋಧಕ  ಅನಂತ್  ಭಾನ್ ಎಚ್ಚರಿಸಿದ್ದಾರೆ.
ಭಾರತದಲ್ಲಿ   ಸರ್ಕಾರಿ ಪ್ರಯೋಗಾಲಯಗಳಲ್ಲಿ  ಈವರೆಗೆ  ಕೊರೊನಾ  ನಿರ್ಧರಣ  ದೃಢೀಕರಣ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.  ೧೨ ಖಾಸಗಿ ಲ್ಯಾಬ್ ಗಳಿಗೆ  ಪರೀಕ್ಷೆ  ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)  ಅನುಮತಿ ನೀಡಿದೆ. ದೇಶಾದ್ಯಂತ ೧೧೮ ಸರ್ಕಾರಿ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿದ್ದರೂ  ಈವರೆಗೆ ೯೨   ಪ್ರಯೋಗಾಲಯಗಳಲ್ಲಿ ಮಾತ್ರ  ಪರೀಕ್ಷೆಗಳನ್ನು  ನಡೆಸಲಾಗಿದೆ.  ೨೬ ಲ್ಯಾಬ್‌ನಲ್ಲಿ ಪರೀಕ್ಷೆ  ನಡೆಸುವ   ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.
ದೆಹಲಿಯ  ದ್ವಾರಕಾ  ಪ್ರದೇಶದ   ಹಸಿಬುಲ್ ನಿಶಾ (೩೫) ಕಳೆದ ಆರು ದಿನಗಳಿಂದ ಒಣ ಕೆಮ್ಮು, ನೆಗಡಿ ಮತ್ತು ಜ್ವರದಿಂದ ಬಳಲುತ್ತಿದ್ದಾರೆ.   ಕೊರೊನಾ  ವೈರಸ್   ಸೋಂಕು  ತಗುಲಿದೆ  ಎಂಬ ಅನುಮಾನದಿಂದ   ಮೂರು ಖಾಸಗಿ ಆಸ್ಪತ್ರೆಗಳಿಗೆ  ಅಲೆದಾಡಿದರೂ  ಪರೀಕ್ಷೆ ನಡೆಸಲು ನಿರಾಕರಿಸಿವೆ.  ಸರ್ಕಾರಿ ಆಸ್ಪತ್ರೆಗೆ  ತೆರಳಿದರೆ, ಪ್ಯಾರಾಸಿಟಮಾಲ್  ಮಾತ್ರೆ  ನೀಡಿ  ಕಳುಹಿಸುತ್ತಿದ್ದಾರೆ. ಯಾವುದೇ ವಿದೇಶಕ್ಕೆ ತೆರಳಿದ,  ವಿದೇಶದಿಂದ ಬಂದವರೊಂದಿಗೆ  ಸಂಪರ್ಕ ಹೊಂದದ ಕಾರಣ   ಕೊರೊನಾ  ಪರೀಕ್ಷೆ  ಅಗತ್ಯವಿಲ್ಲ  ಹೇಳಿ  ಕಳುಹಿಸಿದ್ದಾರೆ.