ಕೊರೊನಾ : ಅಮೆರಿಕದಲ್ಲಿ 50 ಸಾವಿರ ದಾಟಿದ ಸೋಂಕಿತರ ಸಂಖ್ಯೆ; 18637 ಸಾವು

ವಾಷಿಂಗ್ಟನ್, ಏ 11, ಅಮೆರಿಕದಲ್ಲಿ 50 ಸಾವಿರ ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳು ತಿಳಿಸಿವೆ.ಒಂದೇ ದಿನ ಎರಡು ಸಾವಿರಕ್ಕೂ ಹೆಚ್ಚು ಕೊರೊನಾ ಸಾವಿನ ಪ್ರಕರಣಗಳೂ ದಾಖಲಾದ ಮೊದಲ ರಾಷ್ಟ್ರ ಅಮೆರಿಕ. ಅಲ್ಲಿ ಶುಕ್ರವಾರ ಒಂದೇ ದಿನ 2508 ಜನರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 18637 ಕ್ಕೆ ಏರಿಕೆಯಾಗಿದೆ. ಇಟಲಿಯಲ್ಲಿ ಅತಿ ಹೆಚ್ಚು 18849 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಅಮೆರಿಕದಲ್ಲಿ ಅತಿ ಹೆಚ್ಚು 500399 ಜನರಲ್ಲಿ ಸೋಂಕು ದೃಢಪಟ್ಟಿದೆ. ನಂತರ ಸ್ಥಾನದಲ್ಲಿ ಸ್ಪೇನ್ ಮತ್ತು ಇಟಲಿ ಇದ್ದು ಕ್ರಮವಾಗಿ 158273 ಮತ್ತು 147577 ಜನರಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಜಗತ್ತಿನಾದ್ಯಂತ ಈವರೆಗೆ 16,96,139 ಜನರಲ್ಲಿ ಸೋಂಕು ಕಂಡುಬಂದಿದ್ದು 102000 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.