ಕರೋನ: ಹೆಚ್ಚುವರಿ ವೆಂಟಿಲೇಟರ್‌ಗಳ ಪೂರೈಕೆಗೆ ಟ್ರಂಪ್ ಭರವಸೆ

ವಾಷಿಂಗ್ಟನ್, ಎಪ್ರಿಲ್ 2,ಅಮೆರಿಕ ಹೆಚ್ಚಿನ ವೆಂಟಿಲೇಟರ್ ಗಳನ್ನು ಹೊಂದಿದ್ದು ಅವುಗಳನ್ನು  ಕರೋನವೈರಸ್ ವಿರುದ್ಧ ಹೋರಾಡುತ್ತಿರುವ  ದೇಶಗಳಿಗೆ  ವಿತರಣೆ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.  ನಾವು ಶೀಘ್ರದಲ್ಲೇ ನಮಗೆ ಅಗತ್ಯಕ್ಕಿಂತಲೂ  ಹೊಂದಿರುವ ಹೆಚ್ಚಿನ ವೆಂಟಿಲೇಟರ್‌ಗಳನ್ನು ಬೇರೆ ದೇಶಗಳಿಗೆ ನೀಡುವುದಾಗಿ ಅವರು ಸುದ್ದಿಗಾರರಿಗೆ ಹೇಳಿದರು. ಭವಿಷ್ಯದ ಕೆಲವು ದುರಂತಗಳಿಗೆ ನಾವು ದಾಸ್ತಾನು ಮಾಡಿದ ನಂತರವೂ  ಬಳಸಿ ಇಡಬಹುದಾದಷ್ಟು ಇನ್ನೂ  ಹೆಚ್ಚಿನ ವೆಂಟಿಲೇಟರ್ಗಳನ್ನು  ಹೊಂದಿದ್ದೇವೆ, ಅದು ಸಂಭವಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಟ್ರಂಪ್ ಬುಧವಾರ ಶ್ವೇತಭವನದಲ್ಲಿ  ಸುದ್ದಿಗಾರರಿಗೆ  ಹೇಳಿದರು. ಹೆಚ್ಚಿನ ವೆಂಟಿಲೇಟರ್ ಗಳನ್ನು  ಅಗತ್ಯವಿರುವ ನ್ನು ದೇಶಗಳಾದ ಇಟಲಿ, ಫ್ರಾನ್ಸ್, ಸ್ಪೇನ್ ನ್ ಗೆ ಕಳಿಸುತ್ತೇವೆ ಅಲ್ಲಿ  ಪರಿಸ್ಥಿತಿ  ತುಂಬಾ ಕಷ್ಟಕರವಾಗಿದೆ ಎಂದರು ಸಾವಿರಾರು ಕರೋನವೈರಸ್ ಪೀಡಿತ ಶ್ವಾಸಕೋಶದ ರೋಗಿಗಳಿಗೆ ಚಿಕಿತ್ಸೆ ನೀಡಲು  ಅನುಕೂಲವಾಗುವಂತೆ  ರಕ್ಷಣಾ ಉತ್ಪಾದನಾ ಕಾಯ್ದೆಯ ಪ್ರಕಾರ  ದೊಡ್ಡ ಕಂಪನಿಗಳು  ವೆಂಟಿಲೇಟರ್‌ಗಳನ್ನು ತಯಾರಿಸುವಂತೆ  ಒತ್ತಾಯಿಸಿದ್ದರು.ಸಾಂಕ್ರಾಮಿಕ ಪೀಡಿತ ದೇಶಗಳಿಗೆ ಸಹಾಯ ಮಾಡುವ ಚೀನಾದ ಪ್ರಯತ್ನದ ಬಗ್ಗೆ  ಕೇಳಿದಾಗ ನಾವು ಮಾತ್ರ  ಎಲ್ಲರಿಗೂ  ಮಾಡುತ್ತಿದ್ದೇವೆ  ಎಂದು ಅವರು ಹೇಳಿದರು.