ಲಿಮಾ, ಏ 19,ಪೆರುವಿನಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು
ಮುಖತಃ ತರಗತಿಗಳನ್ನು ಅನಿರ್ದಿಷ್ಟಾವಧಿಗೆ ರದ್ದುಪಡಿಸಿರುವುದಾಗಿ ಅಧ್ಯಕ್ಷ ಮಾರ್ಟಿನ್
ವಿಜ್ಕರಾ ಭಾನುವಾರ ಘೋಷಿಸಿದ್ದಾರೆ. ಶನಿವಾರದ ವೇಳೆಗೆ ಪೆರುವಿನಲ್ಲಿ 14,420 ಜನರಲ್ಲಿ
ಸೋಂಕು ದೃಢಪಟ್ಟಿದ್ದು 348 ಜನರು ಮೃತಪಟ್ಟಿದ್ದಾರೆ.ಆರೋಗ್ಯ ಸಚಿವಾಲಯದ ಶಿಫಾರಸ್ಸಿನಂತೆ
ಬೃಹತ್ ಸಮಾರಂಭಗಳನ್ನು ರದ್ದುಪಡಿಸಲಾಗಿದೆ. 30 ರಿಂದ 40 ವಿದ್ಯಾರ್ಥಿಗಳಿರುವ
ತರಗತಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ
ವಿದ್ಯಾರ್ಥಿಗಳು ಪಾಠಕ್ಕೆ ಬರುವುದನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಮಕ್ಕಳು,
ಯುವಕರಿಗೆ ಸಮಾಜದಿಂದ ಹೆಚ್ಚಿನ ಕಾಳಜಿ ಅಗತ್ಯ ಎಂದು ಮಾರ್ಟಿನ್ ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳಿಗೆ ದೂರಶಿಕ್ಷಣ ದೊರೆಯುವಂತಾಗಲು ಅರ್ಹ 8,40,000 ವಿದ್ಯಾರ್ಥಿಗಳಿಗೆ ವಿದ್ಯುಮಾನ ಟ್ಯಾಬ್ಲೆಟ್ ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಶಾಲೆಗಳನ್ನು ಮುಚ್ಚುವುದು, ಕರ್ಫ್ಯೂ ಜಾರಿ ಮೊದಲಾದ ಕ್ರಮಗಳನ್ನು ಪೆರು ಸರ್ಕಾರ ಕೈಗೊಂಡಿದೆ.