ಕಲಬುರಗಿ, ಎ10, ಜಿಲ್ಲೆಯಲ್ಲಿ ಮತ್ತೋರ್ವನಲ್ಲಿ ಕೊರೋನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.ಇಂದು ಮಧ್ಯಾಹ್ನ ಪ್ರಕಟಗೊಂಡ ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ.ಇಂದು 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿನಿಂದ ಮೃತಪಟ್ಟ 6 ಕ್ಕೆ ಏರಿಕೆಯಾಗಿದೆ ಈ ಪೈಕಿ ಇಬ್ಬರು ಕಲಬುರಗಿ ಜಿಲ್ಲೆಯವರಾಗಿದ್ದಾರೆ ಎಂಬುದು ಬಹಳ ಆತಂಕದ ಸಂಗತಿ .