ಬೀಜಿಂಗ್, ಮಾರ್ಚ್ 29,ಚೀನಾದಲ್ಲಿ ಕರೋನ ಯಶಸ್ವಿ ಚಿಕಿತ್ಸೆ ನಂತರ ಆಸ್ಪತ್ರೆಯಿಂದ 477 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಶನಿವಾರದ ಅಂತ್ಯದ ವೇಳೆಗೆ ಈವರೆಗೆ ಒಟ್ಟು 75,448 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಯೋಗ ಭಾನುವಾರ ತನ್ನ ದೈನಂದಿನ ವರದಿಯಲ್ಲಿ ಹೇಳಿದೆ . ಶನಿವಾರದ ವೇಳೆಗೆ, COVID-19 ನ ಒಟ್ಟು 81,439 ಪ್ರಕರಣಗಳು ಮುಖ್ಯ ಭೂಭಾಗದಲ್ಲಿ ವರದಿಯಾಗಿದ್ದು ಈವರೆಗೆ 3,300 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.