ನವದೆಹಲಿ, ಏ17, ದೇಶದಲ್ಲಿ ಮಾರಕ ಕೊರೊನಾ ಸೋಂಕಿಗೆ ಈವರೆಗೆ ಬಲಿಯಾದವರ ಸಂಖ್ಯೆ 437ಕ್ಕೆ ಏರಿಕೆಯಾಗಿದ್ದು, ಸೋಂಕಿತ ಪ್ರಕರಣಗಳ ಸಂಖ್ಯೆ 13,387 ಕ್ಕೆ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಬೆಳಿಗ್ಗೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 1007 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, 23 ಮಂದಿ ಬಲಿಯಾಗಿದ್ದಾರೆ. ಇನ್ನು ಈವರೆಗೆ ಕಿಲ್ಲರ್ ಕೊರೊನಾಗೆ. ಈವರೆಗೆ 13,387 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನೆರಡು ಮೂರು ದಿನದಲ್ಲಿ 15 ಸಾವಿರದ ಗಡಿದಾಟುವ ಸಾಧ್ಯತೆ ಇದೆ.
-ದೆಹಲಿ - ಸೋಂಕಿತರ ಸಂಖ್ಯೆ 1,640, 38 ಮಂದಿ ಸಾವು.
-ಮಹಾರಾಷ್ಟ್ರ - 3,202 ಮಂದಿಯಲ್ಲಿ ಸೋಂಕು - 194 ಮಂದಿ ಸಾವು.
-ಮಧ್ಯಪ್ರದೇಶ - 1,164 ಮಂದಿಯಲ್ಲಿ ಸೋಂಕು - 55 ಮಂದಿ ಸಾವು.
-ಗುಜರಾತ್ - 929 ಸೋಂಕಿತರು - 36 ಮಂದಿ ಸಾವು .
-ತೆಲಂಗಾಣ - 700 ಜನರಿಗೆ ಸೋಂಕು - 18 ಜನ ಸಾವು.
-ಕರ್ನಾಟಕ - 315 ಕೊರೊನಾ ಪ್ರರಕಣ ದಾಖಲಾಗಿದ್ದು - 13 ಮಂದಿ ಸಾವು.