ಸಹಕಾರಿ ಬ್ಯಾಂಕದಿಂದ ಅಧ್ಯಕ್ಷ ಮಹಬೂಬ ಕೆಂಭಾವಿಗೆ ಸನ್ಮಾನ
Cooperative Bank felicitates President Mehbooba Kembhai
ತಾಳಿಕೋಟಿ, 13 : ಪಟ್ಟಣದ ಮುಸ್ಲಿಂ ಸಮಾಜದ ಪ್ರತಿಷ್ಠಿತ ದಿ. ಮುಸ್ಲಿಂ ಕೋ- ಆಪರೇಟಿವ್ ಬ್ಯಾಂಕ್ ಇದರ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಮಹಬೂಬ ಹಜರೇಸಾಬ ಕೆಂಬಾವಿ ಇವರನ್ನು ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ವತಿಯಿಂದ ಬುಧವಾರ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಸಜ್ಜನ ಮಾತನಾಡಿ ಮುಸ್ಲಿಂ ಬ್ಯಾಂಕ್ ಪಟ್ಟಣದ ಅತ್ಯುತ್ತಮ ಬ್ಯಾಂಕುಗಳಲ್ಲಿ ಒಂದಾಗಿದೆ ಇದನ್ನು ಇನ್ನಷ್ಟು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಲು ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅವಕಾಶದ ಸದುಪಯೋಗ ಮಾಡಿಕೊಂಡು ಶಕ್ತಿಮೀರಿ ಕೆಲಸ ಮಾಡಿ ಆಡಳಿತ ಮಂಡಳಿ ವತಿಯಿಂದ ನಿಮಗೆ ಅಭಿನಂದಿಸಿ ಶುಭ ಹಾರೈಸುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಕೆಂಬಾವಿಯವರು ನನ್ನನ್ನು ಕರೆದು ಸನ್ಮಾನಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ, ನಿಮ್ಮ ಸಲಹೆ ಸಹಕಾರ ಮಾರ್ಗದರ್ಶನ ಸದಾ ಇರಲಿ ಎಂದರು.ಈ ಸಮಯದಲ್ಲಿ ಬ್ಯಾಂಕನ ಉಪಾಧ್ಯಕ್ಷ ಚಿಂತಪ್ಪಗೌಡ ಯಾಳಗಿ, ನಿರ್ದೇಶಕರಾದ ಎಂ.ಎಸ್.ಸರಶಟ್ಟಿ, ಬಾಬು ಹಜೇರಿ, ದ್ಯಾಮನಗೌಡ ಪಾಟೀಲ, ಸುರೇಶ ಪಾಟೀಲ, ಸಂಜೀವಪ್ಪ ಬರದೇನಾಳ, ರಾಮಣ್ಣ ಕಟ್ಟಿಮನಿ, ಮುಸ್ಲಿಂ ಬ್ಯಾಂಕ್ ನಿರ್ದೇಶಕರಾದ ತನ್ವೀರ ಮನಗೂಳಿ, ಮುನ್ನಾ ಅರ್ಜುಣಗಿ, ಪಿಕೆಪಿಎಸ್ ನಿರ್ದೇಶಕ ದಸ್ತಗೀರ ಕೆಂಭಾವಿ, ಸಹಕಾರಿ ಬ್ಯಾಂಕ್ ವ್ಯವಸ್ಥಾಪಕಿ ಮಣೂರ ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 