ಸಾಮಾಜಿಕ ಜೀವನದಲ್ಲಿ ಸಹಕಾರ ಪ್ರಮುಖವಾಗಿದೆ: ಬಸವರಾಜ ಮಾಳೇದ
Cooperation is important in social life: Basavaraja Maleda
ಬೆಟಗೇರಿ 14: ಸಹಕಾರ ತತ್ವದಡಿ ಗ್ರಾಮೀಣ ವಲಯದಲ್ಲಿ ಸಹಕಾರಿ ಸಂಘ, ಸಂಸ್ಥೆಗಳ ನೀಡುತ್ತಿರುವ ಸಹಕಾರದ ಸೇವೆ ಅತ್ಯಂತ ಮಹತ್ವದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸವರಾಜ ಮಾಳೇದ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ ಶುಕ್ರವಾರ ನ.14 ರಂದು ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಪ್ರಯುಕ್ತ ಸಹಕಾರಿ ಧ್ವಜಾರೋಹಣ ನೆರವೇರಿಸಿ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಬ್ಬ ವ್ಯಕ್ತಿಯು ನಿರ್ವಹಿಸಲಾಗದ ವಿಷಯಗಳನ್ನು ಸಹಕಾರವು ಸಾಧಿಸುತ್ತದೆ. ಸಾಮಾಜಿಕ ಜೀವನದಲ್ಲಿ ಸಹಕಾರ ಪ್ರಮುಖವಾಗಿದೆ. ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವಾಳವಾಗಿವೆ ಎಂದರು.
ಸ್ಥಳೀಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಮಾಳೇದ ಅವರು, ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ, ಪುಷ, ಸಹಕಾರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು.
ಸಹಕಾರಿ ಮುಖಂಡರಾದ ಶಿವನಪ್ಪ ಕಂಬಿ, ಕಲ್ಲಪ್ಪ ಹುಬ್ಬಳ್ಳಿ, ಮಲ್ಲಿಕಾರ್ಜುನ ನೀಲಣ್ಣವರ, ಈಶ್ವರ ಬಡಿಗೇರ, ಅಶೋಕ ದೇಯನ್ನವರ, ಅಪ್ಪಯ್ಯಪ್ಪ ಸಿದ್ನಾಳ, ಶಿವು ಮೇಳೆನ್ನವರ, ವೀರಭದ್ರ ದಂಡಿನ, ಫಕೀರ್ಪ ಪೇದನ್ನವರ, ಮುಖ್ಯ ಕಾರ್ಯನಿರ್ವಾಹಕ ಗುಳಪ್ಪ ಪಣದಿ, ಸ್ಥಳೀಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಗ್ರಾಹಕರು, ಸಹಕಾರಿ ಧುರೀಣರು, ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 