ಜಾತಿ ಗಣತಿಗೆ ಗ್ರಾಮೀಣ ಪ್ರದೇಶದ ಜನರಿಂದಾ ಸಹಕಾರ

Cooperation from people in rural areas for caste census

ಸಂಬರಗಿ, 11 : ಭಾರತದ ಸರ್ವೋಚ್ಚ ನ್ಯಾಯಾಲಯ್ದ ಆದೇಶದ ಮೆರೆಗೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆಗಾಗಿ ಆದೇಶ ಮಾಡಿರುವುದು ತಮ್ಮೆಲ್ಲರ ಗಮನಕ್ಕಿದ್ದು, ಅದರಂತೆ ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ದತ್ತಾಂಶಗಳನ್ನು ಸಂಗ್ರಹ ಮಾಡಲು ನ್ಯಾಯಮೂರ್ತಿ ನಾಗಮೋಹನ ದಾಸರವರ ಆಯೋಗವು ಜಾತಿ ಗಣತಿಯನ್ನು ಮಾಡಲು ಪ್ರಾರಂಭಮಾಡಿದೆ. ಜಾತಿ ಗಣತಿಗೆ ಗ್ರಾಮೀಣ ಪ್ರದೇಶದಲ್ಲಿ ಜನರು ಆಸಕ್ತಿಯಿಂದ ನೋಂದಾಯಿಸುತ್ತಿದ್ದಾರೆ.  

ಶಿಕ್ಷಕರು ಮನೆ ಮನೆಗೆ ತೆರಳಿ ಒಳ ಮೀಸಲಾತಿ ಜಾತಿ ಗಣತಿಯನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಬೆಳಗ್ಗಿನ ಜಾವಾ ಗ್ರಾಮಾಂತ್ರ ಪ್ರದೇಶದಲ್ಲಿ ಜನರು ಕೆಲಸಕ್ಕೆ ಹೋದ ನಂತರ ಮಧ್ಯಾಹ್ನದ ವೇಳೆಯಲ್ಲಿ ಮನೆಯಲ್ಲಿ ಜನರು ಇರುತ್ತಾರೆ. ಶಿಕ್ಷಕರು ಆ ಅವಧಿಯಲ್ಲಿ ಅಥವಾ ಬೆಳಗ್ಗೆ 8ಗಂಟೆಯ ಒಳಗೆ ಮನೆ ಮನೆಗೆ ತೆರಳಿ ಗಣತಿ ಮಾಡುತ್ತಿದ್ದಾರೆ. ಬರಗಾಲದಿಂದ ಬಡ ಕುಟುಂಬಗಳು ಕೆಲಸಕ್ಕೆ ಹೋದ ಕಾರಣ ಮನೆಯಲ್ಲಿ ಯಾರೂ ಇರುತ್ತಿಲ್ಲ. ಆ ಕಾರಣ ಶಿಕ್ಷಕರಿಗೆ ಎರಡು ವೇಳೆ ಅವರ ಮನೆಗೆ ಹೋಗಿ ಗಣತಿ ಮಾಡಬೇಕಾಗುತ್ತಿದೆ. ವಿಶೇಷವಾಗಿ ಗಡಿ ಭಾಗದ ಗ್ರಾಮಗಳಲ್ಲಿ ಜನರು ಗಣತಿಗೆ ಸರಿಯಾಗಿ ಮಾಹಿತಿ ನೀಡುತ್ತಿದ್ದಾರೆ.  

ಜಂಬಗಿ, ಸಂಬರಗಿ, ಶಿರೂರ, ಪಾಂಡೇಗಾಂವ, ಖಿಳೇಗಾಂವ, ಆಜೂರ, ಅನಂತಪೂರ, ಬಳ್ಳಿಗೇರಿ, ಮಲಾಬಾದ ಈ ಭಾಗದಲ್ಲಿ ಸೇರಿದ ಎಲ್ಲಾ ಗ್ರಾಮಗಳಲ್ಲಿ ಜನರು ಸಹಕಾರ ನೀಡುತ್ತಿದ್ದು, ಆದರೆ ಕೆಲಸದ ಒತ್ತಡದಿಂದ ಕುಟುಂಬ ಪ್ರಮುಖರು ಸಿಗುತ್ತಿಲ್ಲ. ಆದರೆ ಸರ್ಕಾರದ ಆದೇಶದ ಪ್ರಕಾರ ಶಿಕ್ಷಕರು ಗಣತಿಯಲ್ಲಿ ತೊಡಗಿದ್ದಾರೆ. ಬಿಸಿಲಿನ ಅವಧಿಯಲ್ಲಿ ಮನೆ ಮನೆಗೆ ತೆರಳಿ ಅವರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈ ವೇಳೆ ಶಿಕ್ಷಕರಾದ ನಾರಾಯಣ ಭಂಡಿಗೌಡರ, ಸುಭಾಷ ನಾಗನ್ನವರ ಬಡಾವಣೆಯಲ್ಲಿ ತೆರಳಿ ಬಿಸಿಲಿನಲ್ಲಿ ಜಾತಿ ಗಣತಿ ಮಾಡುತ್ತಿದ್ದಾರೆ.