ಆಸೆ-ಆಕಾಂಕ್ಷೆಗಳ ನಿರೋಧದಿಂದ ತನು-ಮನಗಳ ನಿಯಂತ್ರಣ
Control of the mind through the inhibition of desires and aspirations
ಗದಗ 4: ಇಚ್ಛೆಗಳನ್ನು ನಿಯಂತ್ರಿಸಿಕೊಂಡು ಮನುಷ್ಯ ಜನ್ಮವನ್ನು ವ್ರತನಿಯಮಾದಿಗಳ ಪಾಲನೆ ಮೂಲಕ ಸತ್ಪಲಗೊಳಿಸುವುದೇ ಉತ್ತಮ ತಪವಾಗಿದ್ದು, ಇದ್ದುದರಲ್ಲಿ ಇದ್ದದ್ದನ್ನು ಅನುಭವಿಸುವುದು ಅಂದರೆ ಸಹಜತೆಯಿಂದ ಬಾಳುವುದು ಜಾಣತನವಾಗಿದೆ ಎಂದು ಕುಮಾರಿ ರಂಜಿತಾ ಮೇಲಾಣಿ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ನಿಮಿತ್ತ ಸೊರಟೂರದ ಶಾಂತಿನಾಥ ಬಸದಿಯ ಸಭಾಭವನದಲ್ಲಿ ಆಯೋಜಿಸಿದ್ದ ‘ಉತ್ತಮ ತಪಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ನಮ್ಮ ಶಕ್ತಿ, ಸಾಮರ್ಥ್ಯ, ಯೋಗ್ಯತೆಗಳಿಗೆ ಅನುಸಾರವಾಗಿ ಇಚ್ಛೆಗಳನ್ನು ದಮನಿಸಿ ತಪದ ಮಾರ್ಗದಲ್ಲಿ ಮುನ್ನಡೆದರೆ ತನು-ಮನಗಳ ಮೇಲೆ ನಿಯಂತ್ರಣ ಸಾಧ್ಯವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎನ್. ಮಲ್ಲಾಡದ ಅವರು ನಮ್ಮ ನಾಡಿನ ಅನೇಕ ಮಹಾಪುರುಷರು, ಮಹನೀಯರು ಉನ್ನತೋನ್ನತವಾದ ಪದವಿಗಳಿದ್ದರೂ ಅದನ್ನು ಇಚ್ಛಿಸದೇ ತೃಣಕ್ಕೆ ಸಮಾನವೆಂದು ಭಾವಿಸಿ ಉತ್ತಮ ತಪದ ಮೂಲಕ ಇಂದಿಗೂ ಸ್ಮರಣೀಯರಾಗಿದ್ದಾರೆಂದು ಹೇಳಿದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಇಚ್ಛೆಗಳನ್ನು ನಿಯಂತ್ರಿಸಿಕೊಳ್ಳಲು ಮಹಾಪುರುಷರಷ್ಟೇ ಸಮರ್ಥರಲ್ಲ, ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ‘ಬದುಕು, ಬದುಕಲು ಬಿಡು’, ‘ಪರಸ್ಪರೋಪಗ್ರಹೋ ಜೀವಾನಂ’ ತತ್ವಗಳಿಗೆ ಬದ್ಧವಾಗಿ ಬಾಳಿದರೆ ಸಾಮಾನ್ಯರಿಂದಲೂ ಸಾಧ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯಶವಂತ ಸಿದ್ದಣ್ಣವರ, ಪ್ರಕಾಶ ಮುತ್ತಿನ, ಶಿವಪ್ಪ ಹೋಳಗಿ, ಧರ್ಮಣ್ಣ ಹೊಸೂರ, ಚಂದ್ರ್ಪ ಮಲ್ಲಾಡದ, ಹನಮಂತಪ್ಪ ಬೆಂತೂರ, ಅಭಿನಂದನ ಬೆಂತೂರ ಸೇರಿದಂತೆ ಸ್ಥಳೀಯ ಶ್ರಾವಕ-ಶ್ರಾವಿಕೆಯರು ಭಾಗವಹಿಸಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 