ಮಹಿಳೆಯರ ಸಭಲೀಕರಣಕ್ಕೆ ನಿರಂತರ ಕೆಲಸ : ಬಾಬಾಸಾಹೇಬ ಪಾಟೀಲ

ಮಹಿಳೆಯರ ಸಭಲೀಕರಣಕ್ಕೆ ನಿರಂತರ ಕೆಲಸ : ಬಾಬಾಸಾಹೇಬ ಪಾಟೀಲ  Continuous work for women's empowerment: Babasaheb Patil

ನೇಸರಗಿ. 19 : ನೇಸರಗಿ ಜಿಲ್ಲಾ ಪಂಚಾಯತ ಮಟ್ಟದ ಅತೀ ದೊಡ್ಡ ಗ್ರಾಮ ಮತ್ತು ಹೋಬಳಿ ಅಗಿದ್ದು, ಈ ಗ್ರಾಮದ ಅಭಿವೃದ್ಧಿಗೆ ಅತೀ ಹೆಚ್ಚಿನ ಅಭಿವೃದ್ಧಿಗೆ  ಶ್ರಮಿಸುವೆ ಎಂದು ಚನ್ನಮ್ಮನ ಕಿತ್ತೂರು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.   ಅವರು ಮಂಗಳವಾರದಂದು ನೇಸರಗಿ ಗ್ರಾಮದಲ್ಲಿ ಸುಮಾರು 1 ಕೋಟಿ 30 ಲಕ್ಷ ರೂಪಾಯಿಗಳ ಕಾಮಗಾರಿಗಳಾದ  ಗುಜನಟ್ಟಿ ಪ್ಲಾಟ್ ದಿಂದ ಸೋಮನಟ್ಟಿ  ಹೊಲಕ್ಕೆ ಹೋಗುವ ಕಡಿ ರಸ್ತೆ  ಕಾಮಗಾರಿ, ನೇತ್ರಾವತಿ ಕ್ಲಾತ್ ಸೆಂಟರನ್ನಿಂದ ನೆಮ್ಮದಿ ಕೇಂದ್ರದ ಸಿ ಸಿ ಕಾಮಗಾರಿ, ದೇಶನೂರ ರಸ್ತೆಗೆ  ಹೋಗುವ  ಚರಂಡಿ, ಸುರೇಶ ನವಲಗಟ್ಟಿ ಮನೆಯಿಂದ ಎಪಿಎಂಸಿ ಗೇಟ್, ಜೋಡಗುಡಿ ಅಭಿವೃದ್ಧಿ ಕಾಮಗಾರಿ, ಹೆದ್ದಾರಿ ಪಕ್ಕ ಕಸಾಯಿ ಖಾನೆ ಪಕ್ಕ ಹೊಲಕ್ಕೆ ಹೋಗುವ ಕಾಮಗಾರಿಗಳಿಗೆ ಹಾಗೂ ಇನ್ನಿತರ ಕಾಮಗಾರಿಗಳಿಗೆ  ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನಾನು ಭೂಮಿ ಪೂಜೆ ಮಾಡಿದರೆ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯಲಿದ್ದು,ಮಹಿಳೆಯರು ನನ್ನ ಮುಂದೆ ಬಂದು ನಮಗೆ ರಸ್ತೆ ನೀಡಿ, ಚರಂಡಿ ಮಾಡಿಕೊಡಿ ಎಂದು ಮುಂದೆ ಬರುತಿದ್ದು ಅವರ ಕೆಲಸ ಕಾರ್ಯಗಳಿಗೆ  ಗುತ್ತಿಗೆದಾರರು ಉತ್ತಮ ಮಟ್ಟದ ಕಾಮಗಾರಿ ಕೈಗೊಳ್ಳಿ  ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.    

 ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಮಾಜಿ ಜಿಪಂ ಸದಸ್ಯ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಮಾಜಿ ಎಪಿಎಮ್‌ಸಿ ಅಧ್ಯಕ್ಷ ಬರಮಣ್ಣ ಸತ್ತೆಣ್ಣವರ, ಮುಖಂಡ ಬಾಳಪ್ಪ ಮಾಳಗಿ, ಶಿವಾನಂದ ಕುಂಕುರ, ಸುರೇಶ  ಅಗಸಿಮನಿ, ಕಾಶಿಮ ಜಮಾದಾರ, ಚನಗೌಡ ಪಾಟೀಲ, ಅಶೋಕ ಹತ್ತರಕಿ, ಬಸವರಾಜ ಚಿಕ್ಕನಗೌಡ್ರ, ವಿನಾಯಕ ಮಾಸ್ತಮರ್ಡಿ, ಸುರೇಶ ಕಂಡ್ರಿ, ಶಿವನಪ್ಪ ಮದೇನ್ನವರ, ಡಿ ಎಸ್ ಎಸ್ ಅಧ್ಯಕ್ಷ ರಮೇಶ ರಾಯಪ್ಪಗೋಳ, ಮಲ್ಲಿಕಾರ್ಜುನ ಕಲ್ಲೋಳಿ, ಬಂಗಾರ​‍್ಪ ಮಾಳಣ್ಣವರ, ಸಿದ್ದಪ್ಪ ಮಾಳಣ್ಣವರ, ಸುಜಾತ ಪಾಟೀಲ, ಅಡಿವಪ್ಪ ಮೆಣಸಿನಕಾಯಿ, ಶಿವನಿಂಗ ಹಂಪನವರ, ಪುಂಡಲೀಕ ಹಮ್ಮಣ್ಣವರ, ಪದವಿ ಕಾಲೇಜು ಪ್ರಾಂಶುಪಾಲ ಡಾ. ಎಫ್ ಡಿ ಗದ್ದಿಗೌಡರ, ಪಿ ಯು ಕಾಲೇಜು ಪ್ರಾಂಶುಪಾಲರಾದ ಎಸ್ ವ್ಹಿ ದೊಡ್ಡಮನಿ, ಪ್ರಾಚಾರ್ಯರು, ಸಿಬ್ಬಂದಿ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಎಲ್ಲ ಸಮಾಜದ ಮುಖಂಡರು, ರೈತರು,ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು