ಗ್ರಾಮಗಳ ಅಭಿವೃದ್ಧಿಗೆ ನಿರಂತರ ಕೆಲಸ: ಬಾಬಾಸಾಹೇಬ ಪಾಟೀಲ
Continuous work for the development of villages: Babasaheb Patil
ನೇಸರಗಿ 26: ಕಿತ್ತೂರು ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರಂತರವಾಗಿ ಕೆಲಸ ಮಾಡಿ ಜನರ ಅಪೇಕ್ಷೆಗಳಿಗೆ ತಕ್ಕಂತೆ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಸಮೀಪದ ಸುತಗಟ್ಟಿ ಗ್ರಾಮದಲ್ಲಿ ತುಬಾಕಿ ಅವರ ಓಣಿಯಲ್ಲಿ ರೂ 10 ಲಕ್ಷ ಅನುಧಾನದ, ಪರಗನ್ನವರ ಓಣಿಯಲ್ಲಿ ರೂ. 10 ಲಕ್ಷ ಅನುಧಾನದ ಸಿ ಸಿ ರಸ್ತೆ ಕಾಮಗಾರಿ ಮತ್ತು ಬೈರನಟ್ಟಿ ಗ್ರಾಮದಲ್ಲಿ 15 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಮುಖ್ಯ ರಸ್ತೆ ಸಿ ಸಿ ರಸ್ತೆ ನಿರ್ಮಾಣ ಮತ್ತು ಹಣಮನಹಟ್ಟಿ ಗ್ರಾಮದಲ್ಲಿ 10 ಲಕ್ಷ ರೂಪಾಯಿಗಳ ಸಿ ಸಿ ರಸ್ತೆ ನಿರ್ಮಾಣ ಅನುಧಾನದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಈ ಇಲ್ಲ ಕಾಮಗಾರಿಗಳನ್ನು ಗುತ್ತಿಗೆದಾರರು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸುತಗಟ್ಟಿ, ಬೈರನಟ್ಟಿ, ಹನುಮನಹಟ್ಟಿ ಗ್ರಾಮಗಳ ಹಿರಿಯರು, ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 