ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮ: ಮಧುಮತಿ ಹಿರೇಮಠ

ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮ: ಮಧುಮತಿ ಹಿರೇಮಠ Continuous effort for the betterment of society: Madhumati Hiremath

ಬೆಳಗಾವಿ ಲಿಂಗಾಯತ ಮಹಿಳಾ ಸಮಾಜ ವಾರ್ಷಿಕೋತ್ಸವ: ಪದಗ್ರಹಣ ಸಮಾರಂಭ  

ಬೆಳಗಾವಿ 23: ಇಲ್ಲಿನ ಕನ್ನಡ ಭವನದಲ್ಲಿ ಭಾನುವಾರ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ವಾರ್ಷಿಕೋತ್ಸವದ ನಿಮಿತ್ತ ನಹಲವು ಕಾರ್ಯಕ್ರಮ ಹಾಗೂ ನೂತನ ಸಮಿತಿಯ ಪದಗ್ರಹಣ ಸಮಾರಂಭ ಜರುಗಿದವು. 

ಲಿಂಗಾಯತ ಮಹಿಳಾ ಸಮಾಜದ ನೂತನ ಅಧ್ಯಕ್ಷರಾಗಿ ಮಧುಮತಿ ಹಿರೇಮಠ, ಕಾರ್ಯದರ್ಶಿಯಾಗಿ ರಕ್ಷಾ ನೇಗಿನಾಳ ಹಾಗೂ 18 ಜನ ಸಮಿತಿ ಸದಸ್ಯರು ಪದಗ್ರಹಣ ಮಾಡಲಾಯಿತು. ಬಳಿಕ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಹಾಗೂ ಸದಸ್ಯರು ಸನ್ಮಾನಿಸಿ ಅಭಿನಂದಿಸಲಾಯಿತು. 

ನೂತನ ಅಧ್ಯಕ್ಷೆ ಮಧುಮತಿ ಹಿರೇಮಠ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ಅಧ್ಯಕ್ಷೆಯಾಗಿ ಆಯ್ಕೆ ಆಗಿರುವೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಮಹಿಳಾ ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿರಂತರ ಕೆಲಸ ಮಾಡಲಾಗುವುದು. ವರ್ಷವಿಡಿ ಸಮಾಜ ಏಳಿಗೆಗಾಗಿ ನಿಮ್ಮೆಲ್ಲರ ಸಹಕಾರದಿಂದ ಸಮಾಜೋಪಯೋಗಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನನ್ನ ಆಯ್ಕೆಗೆ ಕೈಜೋಡಿಸಿದ ಆತ್ಮೀಯ ಸದಸ್ಯರಿಗೆ ಅಭಿನಂದನೆಗಳು ಎಂದು ಹೇಳಿದರು. 

ಸಂಸ್ಥಾಪಕ ಗೌರವ ಅಧ್ಯಕ್ಷೆ ಶೈಲಜಾ ಭಿಂಗೆ ಮಾತನಾಡಿ, ಲಿಂಗಾಯತ ಮಹಿಳಾ ಸಮಾಜ 31 ವರ್ಷಗಳಿಂದ ಸಾಗಿ ಬಂದಿದೆ. ಸಮಾಜಕ್ಕೆ ಉಪಯುಕ್ತವಾಗುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಂಡು ನಾಡು-ನುಡಿಯ ಅಭಿವೃದ್ಧಿಗೆ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಬೇಕೆಂದು ಹೇಳಿದರು. 

ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಪ್ರತಿಭಾ ಗುತ್ತಿಗೋಳಿ ಅವರಿಂದ ಯೋಗ ನೃತ್ಯ ಪ್ರದರ್ಶನವಾಯಿತು. 

ಅಧ್ಯಕ್ಷತೆ ವಹಿಸಿದ್ದ ಸುನಿತಾ ಪಾಟೀಲ ಉದ್ಘಾಟಿಸಿದರು, ಕಾರ್ಯದರ್ಶಿ ಶಾರದಾ ಪಾಟೀಲ್ ವಾರ್ಷಿಕ ವರದಿ ವಾಚಿಸಿದರು. ಗೌರವ ಸಮಿತಿಯ ರತ್ನಪ್ರಭಾ ಬೆಲ್ಲದ, ಖಜಾಂಚಿ ಶೋಭಾ ಪಾಟೀಲ, ಶೈಲಾ ಪಾಟೀಲ, ವಿದ್ಯಾ ಗೌಡರ, ಮತ್ತು ಇತರರು ಉಪಸ್ಥಿತರಿದ್ದರು. ಭಕ್ತಿ ನೃತ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಘಟನೆ ಪದಾಧಿಕಾರಿಗಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.