ಕ.ಸಾ.ಪ. ತಾಲೂಕಾಧ್ಯಕ್ಷ ವಾಯ್‌.ಸಿ.ಮಯೂರ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ

 ಕ.ಸಾ.ಪ. ತಾಲೂಕಾಧ್ಯಕ್ಷ ವಾಯ್‌.ಸಿ.ಮಯೂರ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ Consultation meeting under the chairmanship of K.S.P. Taluka President V.C.Mayura

         ಸಿಂದಗಿ 19: ಸಮ್ಮೇಳನವನ್ನು ಸರ್ವರ ಸಹಭಾಗಿತ್ವದೊಂದಿಗೆ ಹೊಸತನದಿಂದ ಆಯೋಜಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಸ್ಥಳೀಯ ಸಂಘಹಿಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಾರ್ಚ್‌ ತಿಂಗಳಲ್ಲಿ ಸಮ್ಮೇಳನವನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲ ವರ್ಗಗಳ ಸಹಕಾರ ಅಗತ್ಯವಿದ್ದು, ಸಿಂದಗಿ ತಾಲೂಕು ಕಸಾಪಗೆ ದೊರಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲೂಕಾಧ್ಯಕ್ಷ ವಾಯ್‌.ಸಿ.ಮಯೂರ ಸಲಹೆ ನೀಡಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಿಂದಗಿ ತಾಲೂಕು ಕಸಾಪ ನೇತೃತ್ವದಲ್ಲಿ ಸಿಂದಗಿಯಲ್ಲಿ ಆಯೋಜಿಸುವ ಕುರಿತು ಹಮ್ಮಿಕೊಂಡ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಭೆಯಲ್ಲಿ ಈ ವಿಷಯವನ್ನು ಸಮಗ್ರವಾಗಿ ಚರ್ಚಿಸಿ, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸಾಹಿತ್ಯ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನವನ್ನು ಸಿಂದಗಿಯಲ್ಲಿ ನಡೆಸುವ ಕುರಿತು ನಿರ್ಣಯವನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು. 

ಸಮಾಲೋಚನಾ ಸಭೆಯಲ್ಲಿ ಅಶೋಕ ಅಲ್ಲಾಪೂರ, ಆನಂದ ಶಾಬಾದಿ, ಪಂಡಿತ ಯಂಪುರೆ, ಮಹಾಂತೇಶ ನೂಲಾನವರ, ಸುನಂದಾ ಯಂಪುರೆ, ಶೈಲಜಾ ಸ್ಥಾವರಮಠ, ಜಯಶ್ರೀ ಹದನೂರ, ಅನಸೂಯಾ ಪರಗೊಂಡ, ಸೈನಜಾ ಮಸಳಿ, ನೀಲಮ್ಮ ಯಡ್ರಾಮಿ ಸೇರಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

ಸಭೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಸಾಹಿತಿ ಅಶೋಕ ಬಿರಾದಾರ, ಶಾಂತೂ ರಾಣಾಗೋಳ, ರಾಜಶೇಖರ ನರಗೋದಿ, ಅಂಬರೀಶ ಚೌಗಲೆ, ಶಶಿಕಲಾ ಅಂಗಡಿ, ವರ್ಷಾ ಪಾಟೀಲ, ಶ್ಯಾಮಲಾ ಮಂದೇವಾಲ, ಜಯಶ್ರೀ ಕುಲಕರ್ಣಿ, ಆರೀಫ್ ಅಂತರಗಂಗಿ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.