ವೀರೇಶ ಕುರ್ತಕೋಟಿ
ಹುನಗುಂದ; ಪ್ರತಿ ವರ್ಷ ಕೃಷಿ ಇಲಾಖೆಯಿಂದ ನಿಮರ್ಾಣವಾಗುವ ಕೃಷಿ ಹೊಂಡಗಳು ಎಜೆಂಟರ ಪಾಲಾಗುತ್ತಿವೆ. ರೈತರಿಂದ ಬೇಡಿಕೆ ಪತ್ರ ಪಡೆಯುದೆ ಅಧಿಕಾರಿಗಳೆ ತಮಗೆ ಬೇಕಾದ ರೈತನ ಹೆಸರಿಲೆ ಬೇಡಿಕೆ ಪತ್ರ ಬರೆದು ಕೃಷಿ ಹೊಂಡ ನಿಮರ್ಿಸುತ್ತಿದ್ದಾರೆಂದು ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ ಆರೋಪಿಸಿದರು.
ಗುರುವಾರ ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಗೆ ಕೃಷಿ ಅಧಿಕಾರಿ ಪ್ರಸಕ್ತ ಸಾಲಿಗೆ 120 ಕೃಷಿ ಹೊಂಡಗಳನ್ನು ನಿಮರ್ಿಸಲಾಗಿದೆ. ಪ್ರತಿ ಆರ್ಎಸ್ಕೆಗೆ ಅಂದಾಜು 20ರಂತೆ ಕೃಷಿ ಹೊಂಡ ನಿಮರ್ಿಸಬೇಕಿದೆ ಎಂದಾಗ ಇನ್ನಾದರೂ ಸರಿಯಾದ ರೈತ ಫಲಾನುಭವಿಗೆ ಕೃಷಿ ಹೊಂಡ ಒದಗಿಸಬೇಕು. ಜೊತೆಗೆ ಈ ಸಾಲಿಗೆ ಕಳಪೆ ಮಟ್ಟದ ಸ್ಪಿಂಕಲರ್ ಸಟ್ಗಳನ್ನು ಒದಗಿಸಿದ್ದರಿಂದ ಅವುಗಳು ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಾಪಂ ಸದಸ್ಯ ಅನೀಲ ನಾಡಗೌಡ ಆರೋಪಿಸಿದರು. ಮುಂದಿನ ವರ್ಷದಲ್ಲಿ ಗುಣಮಟ್ಟವಿರುಸವ ಜೈನ್ ಕಂಪನಿ ಸ್ಪಿಂಕಲರಗಳನ್ನು ಒದಗಿಸಲಾಗುವದೆಂದು ಸಹಾಯಕ ಕೃಷಿ ನಿದರ್ೇಶಕ ಎಮ್.ಎನ್. ಕಂಟ್ಯಾಕ್ಟರ ತಿಳಿಸುತ್ತ
ನೆರೆಹಾವಳಿಗೆ ತುತ್ತಾದ ಬೆಳೆಗಳಿಗೆ ಪರಿಹಾರ ಆಯಾ ರೈತರ ಖಾತೆಗೆ ಜಮೆ ಆಗುತ್ತಿದೆ.
ತಾಲೂಕಿನಲ್ಲಿ 41ಸಾವಿರ ರೈತ ಕುಟುಂಬಳಿವೆ. ಅದರಲ್ಲಿ 14800 ರೈತರ ಖಾತೆಗೆ ಬೆಳೆ ವಿಮೆ ಜಮೆ ಆಗಿದೆ ಎಂದಾಗ ಪರಿಹಾರ ಪಡೆದ ರೈತರ ಪಟ್ಟಿ ನೀಡುವಂತೆ ತಾಪಂ ಸದಸ್ಯ ಅರವಿಂದ ಈಟಿ ಅಧಿಕಾರಿಗ ಸೂಚಿಸಿದರು. ಕೃಷಿ ಅಧಿಕಾರಿ ಮುಂದುವರದು ಹಿಂಗಾರಿಗೆ ಮಳೆ ಸಂಪೂರ್ಣವಾಗಿರುವದರಿಂದ ಬೆಳೆಗಳು ಚನ್ನಾಗಿವೆ. ರೈತರು ಹೆಚ್ಚಿನ ಸಂಖ್ಯಯಲ್ಲಿ ಬೆಳೆ ತುಂಬಿರುವದಿಲ್ಲ. ಮುಂಜಾಗೃತ ಕ್ರಮವಾಗಿ ಹೆಚ್ಚಿಗೆ ಕ್ರಿಮಿನಾಶ ಔಷಧಿ ಸಿಂಪರಣೆಯಿಂದ ಈ ವರ್ಷ ಸೈನಿಕ ಹುಳು ಹತೋಟಿಯಲ್ಲಿ ಇರುವದಾಗಿ ಕಾಂಟ್ಯಾಕ್ಟರ ತಿಳಿಸಿದರು.
ಈಗಾಗಲೆ ಲೋಕೊಪಯೋಗಿ ಇಲಾಖೆಯಿಂದ ನಿಮರ್ಿಸಿದ ರಸ್ತೆಗಳಿಂದ ಏರಿಳಿತಗೊಂಡು ಕೆಲ ಗ್ರಾಮಗಳಲ್ಲಿ ಶಾಲಾ ಆವರಣದೊಳಗೆ ನೀರು ನುಗ್ಗುತ್ತಿದೆ. ಜೊತೆಗೆ ಕೆಲ ರಸ್ತೆಗಳಲ್ಲಿ ಸೇತುವೆಗಳು ನಿಮರ್ಾಗೊಂಡಿಲ್ಲ. ಅಂತಹವುಗಳನ್ನು ತಕ್ಷಣ ನಿಮರ್ಿಸುವಂತೆ ಸದಸ್ಯ ಅಮೀನಪ್ಪ ಸಂದಿಗವಾಡ ಮತ್ತು ಮಂಜುನಾಥ ಮುರಡಿ ಸಭೆ ಗಮನ ಸೆಳೆದಾಗ ಅಂತಹವುಗಳ ಬಗ್ಗೆ ಗಮನ ಹರಿಸಿ ಸರಿಪಡಿಸಲಾಗುವದು. ಹಾಗೂ ಎನ್ಎಚ್ 50ರ ಸೇತುವೆ ಕೆಳಗಿನ ಅಮರಾವತಿ ರಸ್ತೆ ಸೇರಿದಂತೆ ಇನ್ನೂ ಹೆಚ್ಚಿನ ರಸ್ತೆ ನಿಮರ್ಾಣಕ್ಕೆ ಕೆಆರ್ಡಿಸಿಎಲ್ ಗೆ ಪ್ರಸ್ತಾವನೆ ಸಲ್ಲಿಸಿರುವದಾಗಿ ಸಂಬಂಧಿಸಿದ ಪಿಡಬ್ಲುಡಿ ಅಧಿಕಾರಿ ಸಭೆಗೆ ತಿಳಿಸಿದರು.
ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಗಯ ಕೇಂದ್ರಗಳಲ್ಲಿ ವೈಧ್ಯರ ಮತ್ತು ಸಿಬ್ಬಂದಿ ಕೊರತೆ ಕಾಣುವದರಿಂದ ಚಿಕಿತ್ಸೆಗಾಗಿ ಅಲ್ಲಿಯ ಜನ ಪರದಾಡುವಂತಾಗಿದೆ ಎಂದು ತಾಪಂ ಸದಸ್ಯ ಅರವಿಂದ ಈಟಿ ತಿಳಿಸಿದಾಗ ಒಟ್ಟಾರೆ ತಾಲೂಕಿನಾದ್ಯಂತ ವೈಧ್ಯ ಸಿಬ್ಬಂದಿ ಕೊರತೆ ಇದೆ. ಇಷ್ಟರಲ್ಲೆ ಹೊಸ ವೈಧ್ರನ್ನು ನೀಡುವದಾಗಿ ಜಿಲ್ಲಾ ವೈಧ್ಯಾಧಿಕಾರಿಗಳು ತಿಳಿಸಿದ್ದಾರೆಂದು ಟಿಎಚ್ಒ ಡಾ: ಪ್ರಶಾಂತ ತುಂಬಗಿ ಸಭೆಗೆ ತಿಳಿಸಿದರು. ತಮ್ಮ ಆಧಾರ ಕಾರ್ಡನೊಂದಿಗೆ ತಾಲೂಕ ಆಸ್ಪತ್ರೆಗೆ ಬಂದು ಆಯುಷ್ಮಾನ ಕಾರ್ಡ ಪಡೆಯಬೇಕೆಂದು ಟಿಎಚ್ಒ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಮಾಹಿತಿ ಪಡೆಯಲಾತು. ತಾಪಂ ಉಪಾಧ್ಯಕ್ಷೆ ಉಮಾದೇವಿ ಗೌಡರ, ತಾಪಂ ಇಒ ಪುಷ್ಪಾ ಕಮ್ಮಾರ ಸೇರಿದಂತೆ ಎಲ್ಲ ತಾಪಂ ಸದಸ್ಯರು, ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.