ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ: ಸಿಎಂಗೆ ಶಾಸಕಿಯಿಂದ ಮನವಿ

ಲೋಕದರ್ಶನ ವರದಿ 

ಕಾರವಾರ 30: ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಧುನಿಕ ತಂತ್ರಜ್ಞಾನವುಳ್ಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿಮರ್ಾಣ ಮಾಡಬೇಕೆಂದು ಕೋರಿ ಶುಕ್ರವಾರ  ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ  ಶಾಸಕರಾದ  ರೂಪಾಲಿ ಎಸ್. ನಾಯ್ಕ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್. ಡಿ.  ಕುಮಾರಸ್ವಾಮಿರವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು. 

ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣ ತಮ್ಮ ಆಪ್ತ ಕಾರ್ಯದಶರ್ಿಯವರನ್ನು ಕರೆದು ಸೂಕ್ತ ಕ್ರಮಕ್ಕೆ ತಿಳಿಸಿದರು. ಹಾಗೆಯೇ ಈ ಬೇಡಿಕೆಗೆ ಹೆಚ್ಚಿನ ಆದ್ಯತೆ ನೀಡಿ ಆಸ್ಪತ್ರೆ ಸ್ಥಾಪನೆಯ  ಭರವಸೆ ನೀಡಿದರು.