ಅಕ್ರಮ ಭೂಮಿ ಬಳಕೆದಾರರ ಫಲಾನುಭವಿಗಳ ಯಾದಿ ಪುನರ್‌ಪರೀಶೀಲಿಸಿ: ಸಚಿವ ಸತೀಶ ಜಾರಕಿಹೊಳಿ
Constituency Bagara Hukum Committee meeting
ಕ್ಷೇತ್ರದ ಬಗರ ಹುಕುಂ ಸಮಿತಿ ಸಭೆ
ಹುಕ್ಕೇರಿ 24: ಸರಕಾದ ಜಾಗದಲ್ಲಿ ಅಕ್ರಮವಾಗಿ ಭೂ ಸಾಗುವಳಿ ಮತ್ತು ಮನೆ ನಿರ್ಮಿಸಿಕೊಂಡಿರುವ ಸರಕಾರದ ಮಾನದಂಡಗಳ ಅನ್ವಯ ಫಲಾನುಭವಿಗಳ ಅರ್ಜಿಗಳನ್ನು ಪುನರ್ ಪರೀಶಿಲಿಸಿ ಪಟ್ಟಿ ಸಿದ್ಧ ಪಡಿಸಬೆಕೇಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಸ್ಥಳೀಯ ಕಂದಾಯ ಇಲಾಖೆಯ ಆಶ್ರಯದಲ್ಲಿ ವಿದ್ಯುತ್ ಸಹಕಾರಿ ಸಂಘದ ಸಭಾ ಭವನದಲ್ಲಿ ಜರುಗಿದ ಬಗರ ಹುಕುಂ ಸಾಗುವಳಿ ಸಕ್ರಮ ಸಮಿತಿ ಸಭೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನಲ್ಲಿ ಸಕ್ರಮಕ್ಕಾಗಿ ಸಲ್ಲಿಕೆಯಾಗಿದ್ದ ಅರ್ಹ ಪಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಸಿಗಬೇಕಾಗಿತ್ತು. ಇಲ್ಲಿಯವರಿಗೂ 42 ಗ್ರಾಮಗಳ 1500 ಅರ್ಜಿಗಳು ಸರಕಾರದ ಹಲವು ನಿಯಮಗಳ ತಾಂತ್ರಿಕತೆಯಿಂದ ಸರಕಾರ ಮಟ್ಟದಲ್ಲಿ ತಿರಸ್ಕ್ರತಗೊಂಡಿವೆ. ಕಾರಣ ಸರಕಾರದ ಜಮೀನಲ್ಲಿ ಮನೆಕಟ್ಟಿಕೊಂಡ ಭೂ ಸಾಗುವಳಿ ಮಾಡುತ್ತಿರುವ ಪಲಾನುಭವಿಗಳಿಂದ ಮರಳಿ ಗಾಯಾರಾಣಕ್ಕೆ ಸ್ಥಳ ಪಡೆಯಲು ಸಾಧ್ಯವಾಗುವದಿಲ್ಲ. ಅವರ ಅರ್ಜಿಗಳನ್ನು ಬಗರ ಹುಕುಂ ಸಮಿತಿ ಸಭೆಯ ಮೂಲಕ ಪುನರ್ ಪರೀಶೀಲಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಿ ಕ್ರಮ ಕೈಗೊಳ್ಳಬೇಕು ಎಂದರು.
ತಹಶಿಲ್ದಾರ ಮಂಜುಳಾ ನಾಯಕ ಮಾಹಿತಿ ನೀಡಿ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಇನ್ನಿತರ ದಾಖಾಲಾತಿಗಳ ಕೊರತೆಯಿಂದ ಅರ್ಜಿಗಳು ಸರಕಾರದ ಹಂತದಲ್ಲಿ ತಿರಸ್ಕೃತಗೊಂಡಿವೆ ಎಂದರು. ಸಮಿತಿ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದರು.
ಅರ್ಜಿದಾರರು ವರ್ಷಗಳಿಂದ ಅರ್ಜಿದಾರರು ಭೂ ಸಾಗುವಳಿ ಹಾಗೂ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ ಅವರಿಗೆ ಅಧಿಕೃತವಾಗಿ ಸಕ್ರಮಗೊಳಿಸಬೇಕೆಂದು ಸಚಿವರಲ್ಲಿ ವಿನಂತಿಸಿದರು. .
ನಂತರ ಬಗರ ಹುಕ್ಕುಂ ಸದಸ್ಯರ ಸಭೆಯಲ್ಲಿ ಅರ್ಜಿಗಳ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ತಿರ್ಮಾನಿಸಲಾಯಿತು.
ತಹಶಿಲ್ದಾರ ಮಂಜುಳಾ ನಾಯಕ, ಇ. ಓ ಟಿ ಆರ್ ಮಲ್ಲಾಡದ ಹುಕ್ಕೇರಿ ಮತ ಕ್ಷೇತ್ರ ಹಾಗೂ ಯಮಕನಮರಡಿ ಕ್ಷೇತ್ರದ ಬಗರಹುಕುಂ ಸಮಿತಿ ಸದಸ್ಯರಾದ ಕೆಂಪಣ್ಣ ಶಿರಹಟ್ಟಿ, ದ್ರಾಕ್ಷಾಯಣಿ ಏಶಿ, ಸದಾನಂದ ಗುಡಿಕಡೆ, ಶಿಕಂದರ ಸನದಿ, ಭಾರತಿ ಬೆಣ್ಣಿ, ಶರದ ಪಾಟೀಲ , ಹುಕ್ಕೇರಿ ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಹಾಗೂ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಮುಖಂಡರಾದ ಮೌನೇಶ ಪೋತದಾರ, ಕಿರಣ ರಜಪೂತ, ರಿಷಭ ಪಾಟೀಲ, ಸಂಜು ಗಂಡ್ರೋಳಿ, ಸಲಿಂ ಕಳಾವಂತ, ಮಹಾಂತೇಶ ಮಗದುಮ್ಮ ಮಲ್ಲಿಕಾರ್ಜುನ ರಾಶಿಂಗೆ, ರಾಜು ಸಿದ್ನಾಳ, ಇಲಿಯಾಸ ಇನಾಮದಾರ, ಭೀಮಗೌಡ ಅಮ್ಮಣಗಿ, ಸಾಧಿಕ ಮಕಾನದಾರ, ಮತ್ತಿತರರು ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ಗ್ರೇಡ್-2 ತಹಸೀಲ್ದಾರ ಪ್ರಕಾಶ ಕಲ್ಲೋಳಿ, ಶಿರಸ್ತೆದಾರರಾದ ಎನ್.ಆರ್.ಪಾಟೀಲ, ಸಿ.ಪಿ ಪಾಟೀಲ, ಕಂದಾಯ ನೀರೀಕ್ಷಕರಾದ ಎಂ.ಬಿ.ಸಾರಾಪೂರಿ, ಎ.ಎಂ.ಕಮತನೂರ, ಸಿ.ಕೆ.ಕಲಕಾಂಬಕರ, ಇಲಾಖೆಯ ಸಹಾಯಕ ನಿರ್ದೇಶಕಿ ತನ್ವಿನ್ ಡಂಗೆ , ಅನಿತಾ ಏಶಿ, ಅಬ್ದುಲ್ ಸನದಿ, ಬಸವರಾಜ ಚೌಗಲಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ಸಂತೋಷ ನಾಯಕ, ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 