ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಪರಿಶ್ರಮಕ್ಕೆ ಪ್ರತಿಫಲ ಸಾಧ್ಯ: ತನುಜಾ

ಲೋಕದರ್ಶನ ವರದಿ

ಶಿರಹಟ್ಟಿ 03: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಪರಿಶ್ರಮ ಪಟ್ಟವರಿಗೆ ಪ್ರತಿಫಲ ಸಾಧ್ಯ ಎಂದು ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಣಿ ತನುಜಾ ರಾಂಪುರೆ ಹೇಳಿದರು.

ಅವರು ಪಟ್ಟಣದ ಜಗದ್ಗುರು ಫಕ್ಕೀರೇಶ್ವರ ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಐ.ಕ್ಯೂ.ಎ.ಸಿ ಮತ್ತು ಪ್ಲೇಸಮೆಂಟ್ ಘಟಕದ ಸಹಭಾಗಿತ್ವದಲ್ಲಿ ನಡೆದ ಸಂಚಾರಿ ಉದ್ಯೋಗ ನೋಂದಣಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪದವಿ ಶಿಕ್ಷಣದ ನಂತರ ವಿದ್ಯಾರ್ಥಿ ಗಳಿಗಿರುವ ಹಲವಾರು ಶೈಕ್ಷಣಿಕ ಮತ್ತು ವಿವಿಧ ಉದ್ಯೋಗ ಅವಕಾಶಗಳನ್ನು ವಿವರಿಸಿದರು. ಮತ್ತು ಪದವಿ ನಂತರ ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಹಲವಾರು ಉದ್ಯೋಗ ಅವಕಾಶಗಳು ಅನೇಕ ಕ್ಷೇತ್ರಗಳಲ್ಲಿ ಖಾಲಿಯಿದ್ದು ಅವುಗಳಿಗೆ ಅರ್ಹ ಅಭ್ಯಥರ್ಿಗಳ ಅವಶ್ಯಕತೆಯಿದೆ ಎಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಸುಮಾರು 228 ವಿದ್ಯಾಥರ್ಿಗಳನ್ನು ಸಂಚಾರಿ ಉದ್ಯೋಗದಡಿ ನೊಂದಣಿ ಮಾಡಿಕೊಳ್ಳಲಾಯಿತು. ಮಾಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್.ಆರ್.ಶಿರಹಟ್ಟಿ, ನಾಗರಾಜ.ಡಿ, ಹನುಮಂತಪ್ಪ, ತಿಪ್ಪೇಸ್ವಾಮಿ, ಫಕೀರೇಶ ಜಾಲಿಹಾಳ, ಸವಿತಾ ಹೋಸಮಠ, ಬಸವರಾಜ ಕುರಗುಂದ, ಶಮಕರಪ್ಪ ಬಾರಕೇರ, ಅನುಪಮಾ ಭಾತಖಂಡೆ, ಕವಿತಾ ಮುಗಳಿ, ಎಸ್.ಎನ್.ಪಾಟೀಲ, ಈಶ್ವರ ಡೊಂಕಬಳ್ಳಿ, ಸುಚಿತ ಕೋಳಿ, ಎಸ್.ಎಸ್,ಹಳ್ಳಿ, ಮಂಜುನಾಥ ಕಾಳಗಿ ಹಾಗೂ ವಿದ್ಯಾರ್ಥಿಗಳು ಉಪಸ್ತಿತರಿದ್ದರು. ಹನುಮಂತಪ್ಪ ತಳ್ಳಳ್ಳಿ ನಿರೂಪಿಸಿದರು.