ದ್ಯಾಮವ್ವ ದೇವಿ ನೂತನ ಗೋಪುರದ ಕಳಸಾರೋಹಣ
Consecration of the finial on the new gopura of Goddess Dyamavva
ರಾಣೇಬೆನ್ನೂರು, ಆ.28: ತಾಲೂಕಿನ ಸುಕ್ಷೇತ್ರ ಹಳೆ ಹುಲಿಹಳ್ಳಿ ಗ್ರಾಮದ ಗ್ರಾಮ ದೇವತೆಯಾದ ದ್ಯಾಮವ್ವ ದೇವಿಯ ನೂತನ ಗೋಪುರದ ಕಳಸಾರೋಹಣ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಹಳೆ ಹುಲಿಹಳ್ಳಿ ಗ್ರಾಮದಲ್ಲಿ ಸಾಂಪ್ರದಾಯಿಕ ಧಾರ್ಮಿಕ ಪರಂಪರೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು. ಗ್ರಾಮದೇವತೆ ದ್ಯಾಮವ್ವ ದೇವಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಸಾರ್ವಜನಿಕ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಗೋವಿನಕೋವಿ ಮಠದ ಮಠಾಧ್ಯಕ್ಷರಾದ ಶ್ರೀಶ್ರೀ ನಂಜುಂಡಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ, ಭಕ್ತರಿಗೆ ಆಶೀರ್ವಚನ ನೀಡಿದರು.
ಮೆರವಣಿಗೆಯಲ್ಲಿ ಸಾಂಸ್ಕೃತಿಕ ವೈಭವ
ಕಳಸಾರೋಹಣದ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಜನಪದ ಸಂಸ್ಕೃತಿ ಪ್ರತಿಬಿಂಬಿಸುವ ವಿವಿಧ ಕಲಾ ತಂಡಗಳು ಹಾಗೂ ವಾದ್ಯಗಳ ಪ್ರದರ್ಶನ ಗಮನ ಸೆಳೆಯಿತು. ಡೊಳ್ಳು, ನಾಗಾರಿ, ಭಜನೆ, ಸಮಾಳ, ಜಾಂಜ್ ಪಥಕ, ಕೋಲಾಟ, ವೀರಗಾಸೆ ಸೇರಿದಂತೆ ವಿವಿಧ ವಾದ್ಯ ಹಾಗೂ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕರಿಯಪ್ಪ ಹುಚ್ಚಣ್ಣನವರ, ಮುಖಂಡರಾದ ಚಂದ್ರ್ಪ ಗಂಗಣ್ಣನವರ, ರುದ್ರಗೌಡ ಪಾಟೀಲ, ಕರಿಯಪ್ಪ ಬಾಕಿ, ಎಫ್.ಎಚ್. ಚಮಟಿ, ನಾಗರಾಜ ಡೊಂಬರ, ವಿಜಯ ಬೆಳಗಿ, ಹೆಗ್ಗಪ್ಪ ಡೊಂಬರ, ಶಂಭುಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಹುಸೇನಸಾಬ್ ಬಿದರಿ, ಶಫೀಲಸಾಬ್ ಬಿದರಿ, ಮಹ್ಮದಸಾಬ್ ಹೊಸಮನಿ, ಕಾಂತೇಶಗೌಡ ಪಾಟೀಲ, ರವಿ ಚಿನ್ನಣ್ಣನವರ, ದಿಳ್ಳೆಪ್ಪ ಹುಚ್ಚಣ್ಣನವರ, ಸಿದ್ದನಗೌಡ ಪಾಟೀಲ, ಮಂಜಪ್ಪ ಹಾವನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗ್ರಾಮಸ್ಥರು, ಶ್ರೀಶಕ್ತಿ ಸಂಘ ಹಾಗೂ ಯುವಕ ಮಂಡಳದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 