ಅಣ್ಣ-ತಂಗಿಯರ ಬಾಂಧವ್ಯ ಸಾರುವ ರಕ್ಷಾಬಂಧನ ಆಚರಣೆ

ಅಣ್ಣ-ತಂಗಿಯರ ಬಾಂಧವ್ಯ ಸಾರುವ ರಕ್ಷಾಬಂಧನ ಆಚರಣೆ  The celebration of Raksha Bandhan, symbolizing the bond between brother and sister


ಲಕ್ಷ್ಮೇಶ್ವರ, ಆ.28: ರಕ್ಷಾಬಂಧನವು ಅಣ್ಣ-ತಂಗಿ ಹಾಗೂ ಅಕ್ಕ-ತಮ್ಮಂದಿರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವಾಗಿದೆ. ಸಹೋದರ-ಸಹೋದರಿಯರ ಜೀವನದ ಪ್ರತಿಯೊಂದು ಹಂತದಲ್ಲೂ ಪರಸ್ಪರ ಬೆಂಬಲವಾಗಿ ನಿಲ್ಲುವ ಸಂಕೇತವಾಗಿ ರಕ್ಷಾಬಂಧನ ಆಚರಿಸಲಾಗುತ್ತದೆ.  

ಈ ಹಿನ್ನೆಲೆಯಲ್ಲಿ ಪಟ್ಟಣದ ವೀರಣ್ಣ ಶಿವಪ್ಪ ಹಡಪದ ಅವರ ಮನೆಯಲ್ಲಿ ಶುಕ್ರವಾರ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಹೋದರಿಯರು ತಮ್ಮ ಸಹೋದರರಿಗೆ ರಕ್ಷಾ ಬಂಧನ ಕಟ್ಟಿ, ಆರತಿ ಬೆಳಗಿ, ಶುಭ ಹಾರೈಸಿದರು.  

ಸಹೋದರರ ಜೀವನ ಸದಾ ಸುಖ, ಶಾಂತಿ ಹಾಗೂ ಯಶಸ್ಸಿನಿಂದ ಕೂಡಿರಲಿ ಎಂದು ಪ್ರಾರ್ಥಿಸಿ, ಪರಸ್ಪರ ಪ್ರೀತಿ ಮತ್ತು ನಂಬಿಕೆ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸಲಾಯಿತು.  ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು.