ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಇಡಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಇಡಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ  Congress protests against ED raid on Minister Satish Jarkiholi


ಅಥಣಿ 10 : ಲೋಕೋಪಯೋಗಿ ಸಚಿವ ಹಾಗೂ ಅಹಿಂದ ನಾಯಕ ಸತೀಶ್ ಜಾರಕಿಹೊಳಿ ಅವರ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.  ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಕೇಂದ್ರ ಸರ್ಕಾರ ದುರುದ್ದೇಶಪೂರ್ವಕವಾಗಿ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ ಎಂದು ಆರೋಪಿಸಿದರು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ವಿರೋಧ ಪಕ್ಷದ ಮುಖಂಡರ ವಿರುದ್ಧ ಇಡಿ ದಾಳಿ ನಡೆಸಿರುವ ಅನೇಕ ಪ್ರಕರಣಗಳಿದ್ದು, ಅವುಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿರುವುದು ಗಮನಾರ್ಹ ಎಂದರು.  

ಕಾಂಗ್ರೆಸ್ ನಾಯಕಿ ಆಶಾ ಪಾಟೀಲ, ಕಾಂಗ್ರೆಸ್ ಮುಖಂಡರಾದ ಅಸ್ಲಂ ನಾಲಬಂದ್, ಉಮೇಶ್ ಪಾಟೀಲ ಸೇರಿದಂತೆ ಹಲವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.  ಪ್ರತಿಭಟನೆಯಲ್ಲಿ ರಮೇಶ್ ಸಿಂದಗಿ, ರಾವಸಾಬ ಐಹೊಳೆ, ತೌಸಿಫ್ ಸಾಂಗ್ಲೀಕರ, ಶಿವಾನಂದ ಸೌದಾಗರ, ಸಂಜೀವ ಕಾಂಬಳೆ, ಸಲಾಂ ಕಲಿ, ಬಸವರಾಜ ಬುಟಾಳಿ, ದಿದಾನಂದ ಮೂಕಣಿ, ಉದಯ ಸೋಳಸಿ, ಪ್ರಮೋದ ಬಿಳ್ಳೂರ, ರವಿ ಬಡಕಂಬಿ, ರಿಯಾಜ್ ಸನದಿ, ಸೈಯ್ಯದಮೀನ್ ಗದ್ಯಾಳ, ವಿಶ್ವನಾಥ ಗಡದೆ, ರೇಖಾ ಪಾಟೀಲ, ಆಶಾ ಪಾಟೀಲ, ಉಮರ್ ಸೈಯ್ಯದ್, ಓಂಪ್ರಕಾಶ ಪಾಟೀಲ, ವಿಜಯಕುಮಾರ ಬಡಚಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.